ಬೆಂಗಳೂರು, ಮೇ.20 (DaijiworldNews/TA): ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರು ತಂಡಗಳನ್ನು ಪ್ಲೇಆಫ್ಗೇರಿಸಿದ ಮೊದಲ ನಾಯಕ ಎಂಬ ದಾಖಲೆಯೊಂದು ಶ್ರೇಯಸ್ ಅಯ್ಯರ್ ಪಾಲಾಗಿದೆ. ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ಈವರೆಗೆ ಮೂರು ತಂಡಗಳನ್ನು ಮುನ್ನಡೆಸಿದ್ದಾರೆ. ಈ ಮೂರು ತಂಡಗಳು ಕೂಡ ಪ್ಲೇಆಫ್ಗೆ ಪ್ರವೇಶಿಸಿದೆ.

ಅವರ ಇತ್ತೀಚಿನ ವೀರೋಚಿತ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಅಂತಿಮವಾಗಿ 11 ವರ್ಷಗಳ ಬಳಿಕ ಪ್ಲೇಆಫ್ನಲ್ಲಿ ಅಪೇಕ್ಷಿತ ಸ್ಥಾನವನ್ನು ಪಡೆದುಕೊಂಡಿತು. 2019 ಮತ್ತು 2020 ರಲ್ಲಿ ಶ್ರೇಯಸ್ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಡೆಲ್ಲಿ ಪಡೆ ಪ್ಲೇಆಫ್ಗೇರಿತ್ತು. ಅದರಲ್ಲೂ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್ಗೇರಿಸುವಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಲಾಗಿದೆ.
ಇದೀಗ ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಚೊಚ್ಚಲ ಸೀಸನ್ನಲ್ಲೇ ಪಂಜಾಬ್ ಪಡೆಯನ್ನು ಪ್ಲೇಆಫ್ಗೆ ತಲುಪಿಸಿದ ಕೀರ್ತಿ ಅವರದ್ದಾಗಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳನ್ನು ಪ್ಲೇಆಫ್ಗೇರಿಸಿದ ಏಕೈಕ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಹೊರಹೊಮ್ಮಿದ್ದು ಹೊಸ ದಾಖಲೆ ಬರೆದಿದ್ದಾರೆ.