ಪುದುಚೇರಿ, ಮೇ 12 (DaijiworldNews/DB): ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಹಂಚಿಕೊಂಡ ಫೇಕ್ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ.

ಹೆಲಿಕಾಪ್ಟರ್ ಸಮುದ್ರದ ಮೇಲ್ಭಾಗದಲ್ಲಿ ಬರುತ್ತಿರುವ ವೇಳೆ ಸಮುದ್ರದ ಮಧ್ಯದಿಂದ ಬೃಹತ್ ಶಾರ್ಕ್ ಹೆಲಿಕಾಪ್ಟರ್ ಮೇಲೆ ದಾಳಿ ಮಾಡುವ ವೀಡಿಯೋವನ್ನು ಅವರು ಹಂಚಿಕೊಂಡಿದ್ದರು. ಅಲ್ಲದೆ, ಈ ವೀಡಿಯೋದ ಕೆಳಗಡೆ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಈ ಅಪರೂಪದ ವೀಡಿಯೋಕ್ಕಾಗಿ 1 ಮಿಲಿಯನ್ ಡಾಲರ್ ಪಾವತಿಸಿದೆ. ವಾಟ್ ಎ ವಿಡಿಯೋ ಎಂದು ಅವರು ಬರೆದುಕೊಂಡಿದ್ದರು. ಆದರೆ ಇದು 2017ರಲ್ಲಿ ತೆರೆಕಂಡ 5 ಹೆಡೆಡ್ ಶಾರ್ಕ್ ಅಟ್ಯಾಕ್ ಚಲನಚಿತ್ರದ ತುಣುಕಾಗಿದ್ದು, ಇದೇ ಕಾರಣದಿಂದ ಬೇಡಿ ಟ್ರೋಲ್ ಆಗಿದ್ದಾರೆ.
ಯಾವುದೇ ವೀಡಿಯೋ ಶೇರ್ ಮಾಡುವ ಮುನ್ನ ಅದರ ಮೂಲವನ್ನು ಅರಿತುಕೊಳ್ಳಬೇಕು ಎಂದು ನೆಟ್ಟಿಗರು ಸಲಹೆ ಮಾಡಿದ್ದಾರೆ. ಅಲ್ಲದೆ ಇನ್ನು ಕೆಲವರು ವ್ಯಂಗ್ಯವಾಗಿ ಟೀಕೆ ವ್ಯಕ್ತಪಡಿಸಿದ್ದಾರೆ.