ಬೆಳಗಾವಿ, ಡಿ. 03 (DaijiworldNews/HR): ಕಾಂಗ್ರೆಸ್ ಪಕ್ಷಕ್ಕೆ ರಮೇಶ ಜಾರಕಿಹೊಳಿ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿಯೇ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಮೊದಲು ತಮ್ಮ ಪಕ್ಷದ ಬಗ್ಗೆ ವಿಚಾರ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಕ್ಷದಲ್ಲಿಯೇ ಗೊಂದಲವಿದ್ದು, ಬಿಜೆಪಿ ಪಕ್ಷದಲ್ಲಿ ಇರುವಂತಹ ಮತಗಳಲ್ಲಿ ಎರಡು ಸ್ಥಾನ ಗೆಲ್ಲಲಿಕ್ಕೆ ಸಾಧ್ಯವಿಲ್ಲ. ರಮೇಶ್ ಜಾರಕಿಹೊಳಿ ಒಂದು ಲಖನ್ ಜಾರಕಿಹೊಳಿ ಅಥವಾ ಮಹಾಂತೇಶ ಕವಟಗಿಮಠ ಇಬ್ಬರಲ್ಲಿ ಒಬ್ಬರನ್ನು ಗೆಲ್ಲಿಸಬೇಕು. ಇಬ್ಬರನ್ನೂ ಗೆಲ್ಲಿಸುವ ಶಕ್ತಿ ಅವರಲ್ಲಿಲ್ಲ" ಎಂದರು.
ಇನ್ನು "ಲಖನ್ ಬಗ್ಗೆ ಬಹಳಷ್ಟು ಟೀಕೆ ಮಾಡಿದ್ದೇವೆ. ಅವರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ನಮ್ಮ ಪಕ್ಷ ಗೆಲ್ಲಬೇಕು. ಅದರಿಂದಲೇ ನಮಗೆ ಗೌರವ ಬರಲಿದೆ" ಎಂದಿದ್ದಾರೆ.
ಬಿಜೆಪಿ ಮತ್ತು ಲಖನ್ ನಮ್ಮ ಪಕ್ಷದ ಎದುರಾಳಿಗಳೇ ಅವರ ವಿರುದ್ಧವೇ ಚುನಾವಣೆ ಮಾಡುತ್ತಿದ್ದೇವೆ. ಸದ್ಯಕ್ಕೆ ಅವರು ಈ ಚುನಾವಣೆ ಮಾಡುವುದರಿಂದ ಸಂಬಂಧ ಜೋಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.