ಭೋಪಾಲ್, ಡಿ. 03 (DaijiworldNews/HR): ಅಪಹರಣಕ್ಕೊಳಗಾಗಿದ್ದ ಬಾಲಕಿಯನ್ನು ರಕ್ಷಿಸಲು ಹರಿಯಾಣಕ್ಕೆ ತೆರಳುತ್ತಿದ್ದ ಮೂವರು ಪೊಲೀಸರು ಸೇರಿ ಐವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಥುರಾ ಸಮೀಪದ ಯುಮುನಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಹೆಡ್ಕಾನ್ಸ್ಟೇಬಲ್ ಭವಾನಿ ಪ್ರಸಾದ್ (52), ಕಾನ್ಸ್ಟೇಬಲ್ಗಳಾದ ಹೀರಾ ದೇವಿ ಪ್ರಜಾಪತಿ (32), ಕಮಲೇಂದ್ರ ಯಾದವ್ (28) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಹೆಡ್ಕಾನ್ಸ್ಟೇಬಲ್ ಸೇರಿದಂತೆ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಮಥುರಾದ ಆಸ್ಪತ್ರೆಗೆ ಸೇರಿಸಲಾಗಿದೆ' ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ಹೆಡ್ಕಾನ್ಸ್ಟೇಬಲ್ ರಥಿ ರಾಮ್, ಎಸ್ಯುವಿ ಚಾಲಕ ಜಗದೀಶ್ ಲೋಧಿ ಮತ್ತು ರವಿ ರಾಯ್ಕ್ವಾರ್ ಎಂದು ಗುರುತಿಸಲಾಗಿದೆ.
ಇನ್ನು ಟಿಕಾಮ್ಗಡದಿಂದ ಅಪಹರಣಕ್ಕೊಳಗಾದ ಬಾಲಕಿಯ ರಕ್ಷಣಾ ಕಾರ್ಯಕ್ಕೆ ನೆರವಾಗಲೆಂದು ಉತ್ತರ ಪ್ರದೇಶದಿಂದ ಕರೆತಂದಿದ್ದ ಪ್ರೀತಿ ಮತ್ತು ಧರ್ಮೇಂದ್ರ ಎಂಬುವವರು ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.