ರಾಜಸ್ಥಾನ, ಎ.03 (DaijiworldNews/PY): ವಯಸ್ಸಾದ ವೃದ್ದರೋರ್ವರು ಚಲಿಸುತ್ತಿದ್ದ ರೈಲಿನಿಂದ ಬಿದ್ದ ಘಟನೆ ರಾಜಸ್ಥಾನದ ಸವಾಯ್ ಮಾಧೋಪೂರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ವೃದ್ದರೊಬ್ಬರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ನಿಲ್ದಾಣ ಸಮೀಪಿಸುತ್ತಿದ್ದ ಸಂದರ್ಭ ನಿಲ್ದಾಣದಲ್ಲಿ ಇಳಿಯಲೆಂದು ರೈಲು ಬೋಗಿ ಬಾಗಿಲಿಗೆ ಬಂದು ನಿಂತಿದ್ದಾರೆ. ಈ ಸಂದರ್ಭ ವೃದ್ದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ವೃದ್ದನ್ನು ಕಾಪಾಡಿದ್ದು, ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಈ ವಿಡಿಯೋವನ್ನು ಕೇಂದ್ರ ರೈಲ್ವೆ ಮಂತ್ರಿ ಪಿಯುಶ್ ಗೋಯಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಚಲಿಸುತ್ತಿರುವ ರೈಲಿನಿಂದ ಬಿದ್ದ ವೃದ್ದನನ್ನು ರಾಜಸ್ಥಾನದ ಸವಾಯಿ ಮಾಧೋಪುರ್ ನಿಲ್ದಾಣದಲ್ಲಿ, ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯ ಕೆಲಸದಿಂದ ಅಪಾಯದಲ್ಲಿದ್ದ ವೃದ್ದನನ್ನು ರಕ್ಷಿಸಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಭದ್ರತಾ ಸಿಬ್ಬಂದಿಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದಿದ್ದಾರೆ.