ಬೆಂಗಳೂರು, ಏ.01 (DaijiworldNews/HR): ಬಿಜೆಪಿ ಹಾಗೂ ಕಾಂಗ್ರೆಸ್ ಟ್ವೀಟರ್ ವಾರ್ ಮುಂದುವರಿದ್ದು, ಬಿಜೆಪಿ ಹರಿದ ಬನಿಯನ್ , ಕಾಂಗ್ರೆಸ್ ಕುಡುಕರ ಬಾರ್ ಎಂದು ವ್ಯಂಗ್ಯವಾಡಿಕೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರ ಈಗ ‘ಹರಿದ ಬನಿಯನ್’ ಅತ್ತ ಎಳೆದರೆ ಇತ್ತ ತೋರುತ್ತದೆ, ಇತ್ತ ಎಳೆದರೆ ಅತ್ತ ತೋರುತ್ತದೆ!" ಎಂದಿದೆ.
ಇನ್ನು ಬಿಜೆಪಿಯವರ ಮಾತು ಕೇಳಿದಾಗಳೆಲ್ಲ ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿಯೇ ಮೊದಲು ಹುಟ್ಟಿದ್ದೋ? ಅನುಮಾನ ಮೂಡುತ್ತದೆ. ಎಳೆ ಕೂಸು ಸಂಸದ ತೇಜಸ್ವಿ ಸೂರ್ಯ ಅವರೇ ಶಾಸಕ ರವಿ ಸುಬ್ರಹ್ಮಣ್ಯ ಅವರು ನಿಮ್ಮ ಚಿಕ್ಕಪ್ಪ ಅಲ್ಲವೇ?! ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಬಿಜೆಪಿ, ಇಂದಿನ ಕಾಂಗ್ರೆಸ್ ಒಂದು "ಕುಡುಕರ ಬಾರ್" ಇದ್ದಂಗೆ. ಇಲ್ಲಿ ನಡೆಯುವುದು ಸಿಡಿ ಅವ್ಯವಹಾರ, ನಾಯಕರ ನಡುವೆ ಕಚ್ಚಾಟ ಹಾಗೂ ಹೊಡೆದಾಟ ಮಾತ್ರ !" ಎಂದು ಹೇಳಿದೆ.