ಶ್ರೀನಗರ, ಮಾ.30 (DaijiworldNews/HR): ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರ ಪಾಸ್ಪೋರ್ಟ್ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಪೊಲೀಸರು ಸಲ್ಲಿಸಿರುವ ವರದಿ ತೃಪ್ತಿದಾಯಕವಾಗಿಲ್ಲ ಎಂಬ ಕಾರಣದ ಹಿನ್ನೆಲೆಯಲ್ಲಿ ಮೆಹಬೂಬಾ ಅರ್ಜಿ ತಿರಸ್ಕರಿಸಲಾಗಿದ್ದು, ಈ ಕುರಿತು ಶ್ರೀನಗರದಲ್ಲಿರುವ ಪ್ರಾದೇಶಕ ಪಾಸ್ಪೋರ್ಟ್ ಕಚೇರಿಯ ಅಧಿಕಾರಿ ಮಾಜಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇನ್ನು ಕೇಂದ್ರಾಡಳಿತ ಪ್ರದೇಶದ ಅಪರಾಧ ಪತ್ತೆ ದಳ ಅರ್ಜಿ ತಿರಸ್ಕರಿಸುವಂತೆ ವರದಿ ಸಲ್ಲಿಸಿದ್ದು, ಈ ಬಗ್ಗೆ ಪ್ರಶ್ನೆಗಳಿದ್ದಲ್ಲಿ ನೇರವಾಗಿ ವಿದೇಶಾಂಗ ಸಚಿವಾಲಯಕ್ಕೇ ದೂರು ನೀಡಬಹುದು ಎಂದು ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೆಹಬೂಬಾ ಮುಫ್ತಿ "ಮಾಜಿ ಮುಖ್ಯಮಂತ್ರಿಗಳು ದೇಶಕ್ಕೆ ಬೆದರಿಕೆಯೊಡ್ಡುವಂಥವರಾಗಿದ್ದಾರೆಯೇ" ಎಂದು ಪ್ರಶ್ನಿಸಿದ್ದಾರೆ.