ನವದೆಹಲಿ, ಮಾ 30 (DaijiworldNews/MS): ಪೊಳ್ಳು ಆಶ್ವಾಸನೆ ಮತ್ತು ಪ್ರಗತಿಯ ನಡುವೆ ಪರಸ್ಪರ ಸಂಬಂಧಗಳು ಇಲ್ಲ. ಜನರು ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕೆಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಹೇಳಿದ್ದಾರೆ.

ಹಿಂದಿ ಭಾಷೆಯಲ್ಲಿ ಟ್ವಿಟ್ ಮಾಡಿರುವ ರಾಹುಲ್," ಪೊಳ್ಳು ಆಶ್ವಾಸನೆ ಮತ್ತು ಪ್ರಗತಿ ಇದಕ್ಕೆ ಒಂದಕ್ಕೊಂದು ಸಂಬಂಧಗಳು ಇಲ್ಲ, ಕೋಟ್ಯಂತರ ಕಾರ್ಮಿಕರು, ಟಿ ತೋಟಗಳ ಕೂಲಿಕಾರರ ಕಣ್ಣೀರು ಹೊರೆಸಲು ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ
ಬಿಜೆಪಿಯೂ ಮಾತಿನ ಮೋಡಿಯ ಮೂಲಕವೇ ಜನರ ದಾರಿ ತಪ್ಪಿಸಲಾಗುತ್ತಿದೆ. ಮೋಡಿ ಮತ್ತು ಪ್ರಗತಿಯ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪಂಚರಾಜ್ಯಗಳ ಚುನಾವಣೆ ವೇಳೆ ರಾಹುಲ್ಗಾಂಧಿ ಟ್ವಿಟ್ ಮಾಡಿದ್ದಾರೆ.