ಕಲಬುರಗಿ, ಮಾ.30 (DaijiworldNews/HR): "ಸಿ.ಡಿ ಪ್ರಕರಣಕ್ಕೆ ಸಂಭಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಅತ್ಯಾಚಾರದ ಪ್ರಕರಣವೆಂದು ಅರ್ಟಿಲ್ 376ರ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಬೇಕು" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಫ್ಐಆರ್ ದಾಖಲು ಮಾಡುವಂತೆ ಮೊದಲೇ ಆಗ್ರಹಿಸಿದ್ದೆ. ಆದರೆ ಈಗ ಯುವತಿ ಪದೇ ಪದೇ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಈ ಪ್ರಕರಣ ಎಸ್ಐಟಿಯಿಂದ ಸರಿಯಾಗಿ ತನಿಖೆ ಆಗುತ್ತದೆ ಎನ್ನುವ ಭರವಸೆ ನನಗಿಲ್ಲ, ಹಾಗಾಗಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಯಲಿ" ಎಂದರು.
ಇನ್ನು ಸಿ.ಡಿ ಯುವತಿ ಭಯ ವಿಲ್ಲದೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲಿ, ಪ್ರಕರಣದ ತನಿಖೆ ಸರಿಯಾಗಿ ಮತ್ತು ನ್ಯಾಯ ಸಮ್ಮತ ರೀತಿಯಲ್ಲಿ ಆಗಬೇಕು. ಸತ್ಯ ಹೊರಬರಬೇಕು" ಎಂದು ಹೇಳಿದ್ದಾರೆ.