ಬೆಂಗಳೂರು, ಮಾ. 26 (DaijiworldNews/SM): ರಾಸಲೀಲೆ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವುಪಡೆದುಕೊಳ್ಳುತ್ತಿದೆ. ಈಗಾಗಲೇ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಇದೀಗ ಯುವತಿಯದ್ದು ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ.

ಆಡಿಯೋದಲ್ಲಿ ಯುವತಿ ತನ್ನ ಸಹೋದರನ ಜೊತೆ ಸಂಭಾಷಣೆ ಮಾಡಿದ್ದಾಳೆ. ಆಡಿಯೋದಲ್ಲಿ ಯುವತಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿರುವುದು ಮತ್ತಶ್ಟು ಕುತೂಹಲ ಮೂಡಿಸಿದೆ. ಆಡಿಯೋ ತುಣಕಿನಲ್ಲಿ ಮೂರು ಬಾರಿ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ.
ಯುವತಿಯೊಂದಿಗೆ ಮಾತನಾಡಿರುವ ಆಕೆಯ ಸಹೋದರ ನಿನಗೆ ಇದೆಲ್ಲಾ ಬೇಕಿತ್ತಾ ಎನ್ನುವ ಪ್ರಶ್ನೆ ಮಾಡಿದ್ದಾನೆ. ಅವರೆಲ್ಲಾ ದೊಡ್ಡವರು ಎಂದಿದ್ದಾನೆ. ಆಗ ಅದಕ್ಕೆ ಉತ್ತರಿಸಿದ ಯುವತಿ ಖುದ್ದು ಡಿಕೆ ಶಿವಕುಮಾರ್ ಮತ್ತು ಡಿಕೆಶಿ ಕಡೆಯವರೇ ಬರುತ್ತಾರೆ ಎಂದು ಹೇಳಿದ್ದಾಳೆ. ಈ ವಿಚಾರ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.