ಚಂಡೀಗಢ, ಮಾ. 26(DaijiworldNews/HR): ನಿಕಿತಾ ತೋಮರ್ ಕೊಲೆ ಪ್ರಕರಣದಲ್ಲಿ ಹರಿಯಾಣದ ಫರಿದಾಬಾದ್ ನ ತ್ವರಿತ ನ್ಯಾಯಾಲಯ ಇಬ್ಬರು ಆರೋಪಿಗಳಾದ ತೌಸೀಫ್ ಮತ್ತು ರೆಹಾನ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ತಿಳಿದು ಬಂದಿದೆ.

ಮಾರ್ಚ್ 24ರಂದು ಈ ಪ್ರಕರಣದಲ್ಲಿ ಸಂಚು, ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ತೌಸೀಫ್ ಮತ್ತು ರೆಹಾನ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಇನ್ನು 2020ರ ಅಕ್ಟೋಬರ್ 26ರಂದು ಕಾಲೇಜಿನಿಂದ ಮನೆಗೆ ಮರಳುತ್ತಿದ್ದಾಗ 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ತನ್ನ ಕಾಲೇಜಿನ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಭಾರೀ ಕೋಲಾಹಲಕ್ಕೆ ಕಾರಣವಾಯಿತು ಎನ್ನಲಾಗಿದೆ.
ಕಾಲೇಜಿನ ಹೊರಗಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಈ ಆಘಾತಕಾರಿ ಕೊಲೆಯ ದೃಶ್ಯ ವು ಸೆರೆಯಾಗಿದ್ದು, ಅದರಲ್ಲಿ ತೌಸೀಫ್ ಮತ್ತು ರೆಹಾನ್ ನಿಕಿತಾ ಅವರನ್ನು ಕಾರಿನಲ್ಲಿ ಬಲವಂತವಾಗಿ ಹತ್ತಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಆದರೆ, ಆಕೆ ತೌಸೀಫ್ ನನ್ನು ಎದುರಿಸಿದಾಗ ಗನ್ ನಿಂದ ಗುಂಡು ಹಾರಿಸಲಾಯಿತು.