ಮುಂಬೈ, ಮಾ. 26(DaijiworldNews/HR): "ದೆಹಲಿಯಲ್ಲಿರುವ ಕೆಲವರು ಯುಪಿಎ-II ರಚಿಸಲು ಸಿದ್ಧತೆ ನಡೆಸುತ್ತಿದ್ದು, ಈ ಕಾರಣಕ್ಕಾಗಿಯೇ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಯುಪಿಎ ಮೈತ್ರಿಕೂಟವನ್ನು ಬಲಪಡಿಸುವ ಅಗತ್ಯವಿದೆ" ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು "ಮೂರು, ನಾಲ್ಕು ಅಥವಾ ಐದನೇ ರಂಗಗಳನ್ನು ರಚಿಸುವಂತಹ ನಾಟಕಗಳೆಲ್ಲ ವಿಫಲವಾಗಿದ್ದು, ಆದ್ದರಿಂದ ಅಸ್ತಿತ್ವದಲ್ಲಿರುವ ಯುಪಿಎ ಮೈತ್ರಿಕೂಟವನ್ನು ಬಲಪಡಿಸುವ ಅಗತ್ಯವಿದೆ" ಎಂದರು.
ಇನ್ನು "ಒಂದು ಪಕ್ಷ ಯುಪಿಎ-II ರಚನೆಯಾದರೆ ಈಗಿರುವ ಯುಪಿಎಗಿರುವ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಆಗ ವಿರೋಧ ಪಕ್ಷಗಳ ಶಕ್ತಿಯೂ ಕುಂದುತ್ತದೆ" ಎಂದು ಹೇಳಿದ್ದಾರೆ.