ಗುವಾಹಟಿ, ಮಾ.26 (DaijiworldNews/PY): "ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ಹಾಗೂ ಭೂ ಜಿಹಾದ್ ಅನ್ನು ನಿಷೇಧಿಸಲು ಕಾನೂನುಗಳನ್ನು ಜಾರಿಗೆ ತರುತ್ತದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಸ್ಸಾಂನ ಕಮ್ರೂಪ್ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಬಿಜೆಪಿಯ ಪ್ರಣಾಳಿಕೆಯಲ್ಲಿ ಹಲವಾರು ವಿಷಯಗಳಿವೆ. ಅವುಗಳ ಪೈಕಿ ಮುಖ್ಯವಾದವುವೆಂದರೆ ಲವ್ ಜಿಹಾದ್ ಹಾಗೂ ಭೂ ಜಿಹಾದ್ ವಿರುದ್ದ ಕಾನೂನು ಜಾರಿಗೆ ತರಲು ಬಿಜೆಪಿ ಸರ್ಕಾರ ಕೆಲಸ ಮಾಡುತ್ತದೆ" ಎಂದಿದ್ದಾರೆ.
"ಐದು ವರ್ಷಗಳ ಬಳಿಕ ರಾಜ್ಯದಲ್ಲಿ ಭೂ ಜಿಹಾದ್ನಲ್ಲಿ ಭಾಗವಹಿಸುವ ಯಾರನ್ನೂ ಕಾಣುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ" ಎಂದು ಹೇಳಿದ್ದಾರೆ.
"ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ಪ್ರತ್ಯೇಕ ಕಾನೂನುಗಳನ್ನು ಜಾರಿಗೆ ತರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು" ಎಂದಿದ್ದಾರೆ.
ತಮ್ಮ ಪಕ್ಷವು ರಾಜ್ಯವನ್ನು ಆಂದೋಲನ-ಮುಕ್ತ ಹಾಗೂ ಭಯೋತ್ಪಾದನೆ-ಮುಕ್ತವಾಗಿ ಪರಿವರ್ತಿಸಿದೆ. ಅದನ್ನು ಉದ್ಯೋಗ ಕೇಂದ್ರವಾಗಿ ಮತ್ತು ಪ್ರವಾಹ ಮುಕ್ತವಾಗಿಸುವ ಭರವಸೆಯನ್ನು ನೀಡಿದ್ದಾರೆ.
"ಪ್ರತಿ ಬ್ಲಾಕ್ನಲ್ಲಿ ಬಿ.ಎಡ್ ಕಾಲೇಜುಗಳನ್ನು ನಿರ್ಮಿಸಲಾಗುವುದು ಹಾಗೂ 2022 ರ ಮುನ್ನ ಎರಡು ಲಕ್ಷ ಸರ್ಕಾರಿ ಶಾಲೆಗಳು ಹಾಗೂ ಎಂಟು ಲಕ್ಷ ಖಾಸಗಿ ಉದ್ಯೋಗಗಳು ಸೃಷ್ಟಿಯಾಗಲಿವೆ" ಎಂದು ಹೇಳಿದ್ದಾರೆ.
"ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ನೇತೃತ್ವದ ಬಿಜೆಪಿ ಅಸ್ಸಾಂನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಷಾ ಅವರು ಇತ್ತೀಚಿನ ವಾರಗಳಲ್ಲಿ ಆಗಾಗ್ಗೆ ಭೇಟಿ ನೀಡಿರುವುದನ್ನು ಗಮನಿಸಿದ್ದೇನೆ" ಎಂದಿದ್ದಾರೆ.
"ಎಂಟನೇ ತರಗತಿಯ ನಂತರದ ಪ್ರತೀ ಹೆಣ್ಣು ಮಕ್ಕಳಿಗೆ ಸೈಕಲ್ ನೀಡಲಾಗುವುದು ಹಾಗೂ ಪ್ರತೀ ಕಾಲೇಜಿನ ಮಹಿಳಾ ವಿದ್ಯಾರ್ಥಿಗಳಿಗೆ ಸ್ಕೂಟಿಯನ್ನು ಉಚಿತವಾಗಿ ನೀಡಲಾಗುವುದು" ಎಂದು ಭರವಸೆ ನೀಡಿದ್ದಾರೆ.
"ಧಾರ್ಮಿಕ ಸಭೆಯ ಸ್ಥಳಗಳನ್ನು 2.5 ಲಕ್ಷ ವೆಚ್ಚದಲ್ಲಿ ಪುನರಾಭಿವೃದ್ದಿ ಮಾಡಲಾಗುವುದು" ಎಂದಿದ್ದಾರೆ
"ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಅವರು, ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆ ಅಸ್ಸಾಂಗೆ ಕಾಂಗ್ರೆಸ್ನ ಆಡಳಿತ ಅವಧಿಯಲ್ಲಿ ಬಂದಿದೆ. ಬಿಜೆಪಿ ಸರ್ಕಾರ ಮಾತ್ರವೇ ಒಳನುಸುಳುವವರನ್ನು ನಿಯಂತ್ರಿಸಲು ಸಾಧ್ಯ" ಎಂದಿದ್ದಾರೆ.