ಅಸ್ಸಾಂ, ಮಾ. 26(DaijiworldNews/HR): "ಈ ಬಾರಿ ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಎರಡನೇ ಭಾರಿಗೆ ಮುಖ್ಯಮಂತ್ರಿ ನಾನೇ ಆಗುತ್ತೇನೆ" ಎಂದು ಸರಬಾನಂದ ಸೋನೊವಾಲ ಭರವಸೆ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಮಜುಲಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಜುಲಿ ಈಗ ಅಭಿವೃದ್ಧಿಯಾಗಿದ್ದು, ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ ಹಾಗೂ ಮುಂದಿನ ದಿನಗಳಲ್ಲಿ ಸೇತುವೆಯ ಕಾರ್ಯವೂ ಕೂಡ ಆರಂಭವಾಗಲಿದೆ" ಎಂದರು.
"ಅಸ್ಸಾಂನ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದು ಮತ್ತು ರಕ್ಷಿಸುವುದು ನಮ್ಮ ಮತ ಪ್ರಚಾರ ಸಭೆಗಳ ಮುಖ್ಯ ಉದ್ದೇಶ" ಎಂದಿದ್ದಾರೆ.
ಇನ್ನು, ಸರಬಾನಂದ ಅವರ ಪ್ರತಿಸ್ಪರ್ಧಿ ಅಸ್ಸಾಂನ ಮಾಜಿ ಸಚಿವ, ಕಾಂಗ್ರೆಸ್ ನ ರಜೀಬ್ ಲೋಚನ್ ಪೆಗು, ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಈಗ ತಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.