ಚೆನ್ನೈ, ಮಾ. 26(DaijiworldNews/HR): ಪಕ್ಷದ ಅಭ್ಯರ್ಥಿಗಳು ರಾಜ್ಯದ ಜನರಿಗಾಗಿ ಸೇವೆ ಸಲ್ಲಿಸುವುದಾಗಿ ವಾಗ್ದಾನ ಮಾಡಿರುವುದಾಗಿ ಮಕ್ಕಳ್ ನೀಧಿ ಮಯಂ ಪಕ್ಷದ ಅಧ್ಯಕ್ಷ ಹಾಗೂ ನಟ ಕಮಲ್ ಹಾಸನ್ ಖಚಿತಪಡಿಸಿದ್ದಾರೆ.

ಈ ಕುತು ಮಾತನಾಡಿದ ಅವಎಉ, "ನಮ್ಮ ಅಭ್ಯರ್ಥಿಗಳು ರಾಜ್ಯದ ಜನರಿಗಾಗಿ ಕೆಲಸ ಮಾಡುತ್ತಾರೆ, ನಮ್ಮ ಅಭ್ಯರ್ಥಿಗಳು ನಾಯಕರಲ್ಲ, ನಿಮ್ಮ ಸೇವಾಕರ್ತರಾಗಿದ್ದಾರೆ. ಅವರು ನಿಮ್ಮ ಕ್ಷೇತ್ರಕ್ಕೆ ಮಾರ್ಗದರ್ಶಕರಾಗಿದ್ದು, ಏನು ಬದಲಾವಣೆ ಮಾಡಿದ್ದಾರೆಂಬುದನ್ನು ನಿಮ್ಮ ಮುಂದಿಡಲಿದ್ದಾರೆ" ಎಂದರು.
ಇನ್ನು ಕೊರೊನಾಗೆ ಒಳಗಾಗಿರುವ ಪಕ್ಷದ ಅಭ್ಯರ್ಥಿ ಪೊನ್ ರಾಜ್ ಅವರ ಪರವಾಗಿ ಕಮನ್ ಹಾಸನ್, ಚೆನ್ನೈನ ಅಣ್ಣಾ ನಗರ್ ವಿಧಾನಸಭಾ ಕ್ಷೇತ್ರದಲ್ಲಿ ಅರುಮ್ಬಕ್ಕಂ ಎಂಎಂಡಿಎ ಕಾಲೊನಿ ಮಾರ್ಕೆಟ್ ವಲಯದಲ್ಲಿ ಪ್ರಚಾರ ನಡೆಸಿದರು ಎನ್ನಲಾಗಿದೆ.