ಬೆಂಗಳೂರು, ಮಾ 26 (DaijiworldNews/MS): ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ವಿಡಿಯೋದಲ್ಲಿದ್ದ ಸಂತ್ರಸ್ತೆ ಯುವತಿಯ ಮೂರನೇ ವಿಡಿಯೋ ರಿಲೀಸ್ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, "ಯುವತಿ ಎಲ್ಲರ ಮುಂದೆ ಬಂದು ಸತ್ಯ ಏನೆಂದು ಹೇಳಲಿ, ನಿಜವಾಗಿ ಏನು ನಡೆದಿದೆ ಎಂದು ಹೇಳಿಕೆ ಕೊಡಲಿ. ಆಕೆ ಅಜ್ಞಾತ ಸ್ಥಳದಿಂದ ಹೊರಬರಲಿ. ಅಜ್ಞಾತವಾಸದಲ್ಲಿ ಇರುವ ಬದಲು ನಿಜವಾಗಿ ನಡೆದಿದ್ದು ಏನು? ಸತ್ಯ ಏನು? ಎಂದು ಹೇಳಲಿ. ತನಿಖೆಗೆ ಸಹಕರಿಸಲಿ ಎಂದು ಹೇಳಿದ್ದಾರೆ.

ಮೊದಲು ಸಂತ್ರಸ್ತ ಯುವತಿ ರಕ್ಷಣೆ ಕೇಳಿದ್ದರು. ಈಗ ಅವರ ತಂದೆ ತಾಯಿಗೆ ಭದ್ರತೆ ಬೇಕೆಂದು ಕೇಳುತ್ತಿದ್ದಾರೆ. ಅಂದರೆ, ಸರ್ಕಾರ ಇಲ್ಲಿಯವರೆಗೆ ಆಕೆಗೆ ಭದ್ರತೆ ಕೊಟ್ಟಿಲ್ಲ ಎಂದಾಯಿತು ಎಂದರು
ಇನ್ನು "ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ವಿರುದ್ಧ ರೇಪ್ ಕೇಸ್ ಹಾಕಬೇಕು ಎಂಬ ಹೇಳಿಕೆಯಿಂದ ಅವರ ಮೇಲೆ ನನಗಿದ್ದ ಗೌರವ ಕಡಿಮೆಯಾಗಿದೆ" ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, " ರಮೇಶ್ ಜಾರಕಿಹೊಳಿ ಆಣತಿಯಂತೆ ಮಾತನಾಡಲು ನನಗೆ ಆಗುವುದಿಲ್ಲ. ನಾನು ನಾನು ವಿರೋಧ ಪಕ್ಷದ ನಾಯಕ. ಎಂದಿಗೂ ಸತ್ಯವನ್ನೇ ಹೇಳಬೇಕಾಗುತ್ತದೆ . ಹಾಗೆಂದು ರಮೇಶ್ ಅವರ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಅವರು ಎಂದಿಗೂ ನನಗೆ ಒಳ್ಳೆಯ ಸ್ನೇಹಿತ ಎಂದಿದ್ದಾರೆ.