ಬೆಂಗಳೂರು, ಮಾ. 26(DaijiworldNews/HR): ಮಾಜಿ ಸಚಿವ ಜಾರಕಿಹೊಳೆ ಸಿಡಿ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಅಧಿಕಾರಿಗಳಿಗೆ "ಕತ್ತರಿ ಹಾಕದ" ಸುಮಾರು 2 ಗಂಟೆ 28 ನಿಮಿಷದ ವಿಡಿಯೋ ಸಿಕ್ಕಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಸಾಂಧರ್ಭಿಕ ಚಿತ್ರ
ಬುಧವಾರ ರಾತ್ರಿ 3ನೇ ಬಾರಿಗೆ ರಮೇಶ್ ಜಾರಕಿಹೊಳಿ ಅವರನ್ನು ಎಸ್ಐಟಿ ಅವರ ಮನೆಯಲ್ಲೇ ವಿಚಾರಣೆ ನಡೆಸಿದ್ದು, ಇತ್ತೀಚೆಗೆ ಪ್ರಕರಣದ ಕಿಂಗ್ ಪಿನ್ ಎನ್ನಲಾದ ಪತ್ರಕರ್ತ ನರೇಶ್ ಗೌಡನ ಮನೆಯಲ್ಲಿದ್ದ ಲ್ಯಾಪ್ ಟಾಪ್ ರಿಟ್ರೈವ್ ಮಾಡಿದಾಗ ಕತ್ತರಿ ಹಾಕದ ವಿಡಿಯೋ ಸಿಕ್ಕಿದೆ ಎಂದು ಮೂಲಗಳು ಹೇಳಿದೆ.
ಮಾಜಿ ಸಚಿವರ ಸ್ಟಿಂಗ್ ಮಾಡಲೆಂದೆ ನಗರದ ಎಸ್ಪಿ ರಸ್ತೆಯಲ್ಲಿರುವ ರಹಸ್ಯ ಕ್ಯಾಮೆರಾ ಖರೀದಿಸಿ ಯುವತಿಯ ವ್ಯಾನಿಟಿ ಬ್ಯಾಗ್ಗೆ ಅಳವಡಿಸಿ , ದೃಶ್ಯ ಸೆರೆಹಿಡಿದಿದ್ದರು. ಸದ್ಯ ಎಸ್ಐಟಿ ಅಧಿಕಾರಿಗಳಿಗೆ ಸಿಕ್ಕಿರುವ 2ಗಂಟೆ 28 ನಿಮಷದ ವಿಡಿಯೋದಲ್ಲಿ ಮಾಜಿ ಸಚಿವರು ಹೋಟೆಲ್ಗೆ ಬರುವುದು, ಕಾರು ಹತ್ತುವುದು, ಆಕೆಯ ಕೋಣೆಗೆ ಹೋಗುವುದು ಸೇರಿದಂತೆ ಪ್ರತಿ ಯೊಂದು ದೃಶ್ಯವು ಸೆರೆಯಾಗಿದೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಅವರ ಸದಾಶಿವನಗರದಲ್ಲಿರುವ ನಿವಾಸಕ್ಕೆ ಬುಧವಾರ ಸಂಜೆ ಭೇಟಿ ನೀಡಿದ ಎಸ್ಐಟಿ ಅಧಿಕಾರಿಗಳ ತಂಡ ಸಂಜೆ 6.30 ರಿಂದ ರಾತ್ರಿ 9.30ರವರೆಗೆ ವಿಚಾರಣೆ ನಡೆಸಿದೆ.