ನವದೆಹಲಿ, ಮಾ.26 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸತ್ಯಾಗ್ರಹವೇ ದೌರ್ಜನ್ಯ, ಅನ್ಯಾಯ, ದಬ್ಬಾಳಿಕೆಯನ್ನು ಕೊನೆಗೊಳಿಸುತ್ತದೆ ಎನ್ನುವುದಕ್ಕೆ ಭಾರತದ ಇತಿಹಾಸ ಸಾಕ್ಷಿಯಾಗಿದೆ" ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸತ್ಯಾಗ್ರಹದಿಂದ ದೌರ್ಜನ್ಯ, ಅನ್ಯಾಯ, ಹಾಗೂ ದುರಹಂಕಾರ ನಾಶವಾಗುತ್ತದೆ ಎನ್ನುವುದಕ್ಕೆ ಭಾರತದ ಇತಿಹಾಸ ಸಾಕ್ಷಿ" ಎಂದು ಹೇಳಿದ್ದಾರೆ.
"ರೈತರು ನಡೆಸುತ್ತಿರುವ ಈ ಆಂದೋಲನ ದೇಶದ ಹಿತದೃಷ್ಟಿಗೆ ಧಕ್ಕೆ ತರದಂತೆ ಹಾಗೂ ಶಾಂತಿಯುತವಾಗಿ ನಡೆಯಲಿ" ಎಂದು ಹೇಳುವ ಮೂಲಕ ಕೇಂದ್ರ ಕೃಷಿ ಕಾಯ್ದೆಗಳ ವಿರುದ್ದ ರೈತರು ಕರೆ ನೀಡಿರುವ ಭಾರತ್ ಬಂದ್ಗೆ ಬೆಂಬಲ ಸೂಚಿಸಿದ್ದಾರೆ.