ನವದೆಹಲಿ, ಮಾ.26 (DaijiworldNews/PY): ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ದೇಶದ 11 ರಾಜ್ಯಗಳಲ್ಲಿ 100ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಿದ್ದು, 30 ಎಫ್ಐಆರ್ ದಾಖಲಿಸಿದೆ.

"ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಬಂದ ದೂರಿನ ಆಧಾರದ ಮೇಲೆ ವಂಚಕರನ್ನು ಪತ್ತೆಹಚ್ಚುವ ಸಲುವಾಗಿ ಈ ದಾಳಿ ನಡೆಸಲಾಗಿದೆ. ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಐಡಿಬಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವುಗಳ ದೂರುದಾರ ಬ್ಯಾಂಕ್ಗಳಾಗಿವೆ" ಎಂದು ಸಿಬಿಐ ವಕ್ತಾರ ಆರ್.ಸಿ.ಜೋಶಿ ಹೇಳಿದ್ದಾರೆ.
ಮುಂಬೈ, ಗುರ್ಗಾಂವ್, ವೆಲ್ಲೂರು, ನಿಮಾದಿ, ಹೈದರಾಬಾದ್, ಕಾನ್ಪುರ, ತಿರುವರೂರು, ಬಳ್ಳಾರಿ, ವಿಶಾಖಪಟ್ಟಣಂ, ಪಶ್ಚಿಮ ಗೋದಾವರಿ, ತಿರುಪ್ಪೂರು, ದೆಹಲಿ, ಮಥುರಾ, ಕರ್ನಾಲ್, ಬೆಂಗಳೂರು, ಸೂರತ್, ಭೋಪಾಲ್, ಅಹಮದಾಬಾದ್, ಗಾಜಿಯಾಬಾದ್, ಗುಂಟೂರು, ಜೈಪುರ, ನೋಯ್ಡಾ, ತಿ,ರುಪತಿ ವಡೋದರಾ, ಶ್ರೀ ಗಂಗಾನಗರ್, ಚೆನ್ನೈ, ಕೊಲ್ಕತ್ತಾ, ರಾಜ್ಕೋಟ್ನಲ್ಲಿ ಶೋಧ ಕಾರ್ಯ ನಡೆದಿದೆ.