ಬೆಂಗಳೂರು, ಮಾ. 25 (DaijiworldNews/SM): ರಾಜಕೀಯಕ್ಕೆ ಬಂದ ಮಹಿಳೆಯರನ್ನು ಸಂಶಯದಿಂದ ನೋಡುವ ರೀತಿಯಲ್ಲಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ದು, ಇದರ ವಿರುದ್ಧ ಮಹಿಳಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಸುಧಾಕರ್ ಅವರು ಸಚಿವ ಸ್ಥಾನದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮಹಿಳೆ ರಾಜಕೀಯಕ್ಕೆ ಯಾಕೆ ಬರಬೇಕೆಂಬ ಪ್ರಶ್ನೆ ಹಿಂದೆ ಇತ್ತು. ಎಲ್ಲಾ ಪಕ್ಷದಲ್ಲೂ ಶಾಸಕಿಯರಿದ್ದಾರೆ. ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಗಮನ ಸೆಳೆದುಕೊಂಡಿದ್ದಾರೆ. ಆದರೆ, ಜನಪ್ರತಿನಿಧಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ಆಕ್ಷೇಪನಾರ್ಹವಾಗಿದೆ. ಇಂತಹ ಹೇಳಿಕೆ ನೀಡಿರುವ ಸಚಿವ ಸುಧಾಕರ್ ಸಚಿವರಲ್ಲ, ಶಾಸಕರಾಗಿ ಇರಲು ಕೂಡ ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಮೊರೆ ಹೋಗಿರುವ ಎಲ್ಲಾ ಆರು ಸಚಿವರು ನೈತಿಕತೆ, ಯೋಗ್ಯತೆ ಕಳೆದಿದ್ದೀರಿ. ನೀವು ತಪ್ಪು ಮಾಡಿ ಕೋರ್ಟ್ ಮೊರೆ ಹೋಗಿದ್ದೀರಿ. ಅವರು ಮಂಚಕ್ಕೆ ಬೆಲೆ ಕೊಡುವ ನಾಲಾಯಕ್ ಸಚಿವ ಎಂದು ಕಿಡಿಕಾರಿದರು.