ಬೆಂಗಳೂರು, ಮಾ.25 (DaijiworldNews/MB) : ''ಸಿಡಿ ಪ್ರಕರಣ ಹೊರಬಂದು 1 ತಿಂಗಳಾದ್ರೂ ಎಫ್ಐಆರ್ ಆಗಿಲ್ಲ, ಬಿಲ್ಡಪ್ಬೊಮ್ಮಾಯಿ ಯುವತಿಗೆ ರಕ್ಷಣೆ ನೀಡಿಲ್ಲ, ಕನಿಷ್ಠ ಯುವತಿಗೆ ರಕ್ಷಣೆಯ ಭರವಸೆಯೂ ನೀಡಿಲ್ಲ'' ಎಂದು ಕಾಂಗ್ರೆಸ್ ಗೃಹ ಸಚಿವ ಬಸವರಾಜು ಬೊಮ್ಮಾಯಿ ವಿರುದ್ದ ಕಿಡಿಕಾರಿದೆ.
ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಅಶ್ಲೀಲ ಸಿಡಿ ಪ್ರಕರಣದಲ್ಲಿರುವ ಸಂತ್ರಸ್ತ ಯುವತಿ ಗುರುವಾರ ತನ್ನ ಎರಡನೇ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಎಸ್ಐಟಿ ಪೊಲೀಸರು ನೀಡಿದ ನಾಲ್ಕೈದು ನೋಟಿಸ್ಗಳಿಗೆ ಉತ್ತರಿಸದ ಯುವತಿ ಗುರುವಾರ ವೀಡಿಯೋ ಮೂಲಕ, "ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೆ ನಾನು ಎಸ್ಐಟಿಗೆ ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಹಾಗೂ ವಿಚಾರಣೆಗೆ ಬರುತ್ತೇನೆ" ಎಂದು ಹೇಳಿದ್ದಾರೆ. ಇನ್ನು ಈ ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳಾದರೂ ಇನ್ನೂ ಎಫ್ಐಆರ್ ದಾಖಲಾಗಿಲ್ಲ.
ಈ ಹಿನ್ನೆಲೆ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಸಿಡಿ ಪ್ರಕರಣ ಹೊರಬಂದು ಸುಮಾರು ಒಂದು ತಿಂಗಳಾಗುತ್ತಾ ಬಂತು, ಈ ಸರ್ಕಾರ ಇದುವರೆಗೂ ಎಫ್ಐಆರ್ ದಾಖಲಿಸಿ ಅತ್ಯಾಚಾರವೆಸಗಿದ ಮಾಜಿ ಮಂತ್ರಿಯನ್ನು ಬಂಧಿಸಿಲ್ಲ. ಯುವತಿ ಎರೆಡೆರಡು ಭಾರಿ ರಕ್ಷಣೆಗೆ ಅಂಗಲಾಚಿದ್ದಾಳೆ ಆದರೂ, ಬಿಲ್ಡಪ್ ಬೊಮ್ಮಾಯಿ ಅವರು ರಕ್ಷಣೆ ನೀಡಲಿಲ್ಲ, ಕನಿಷ್ಠ ರಕ್ಷಣೆಯ ಭರವಸೆಯ ಮಾತೂ ಆಡಲಿಲ್ಲ. ಈ ಸರ್ಕಾರದ ಅಯೋಗ್ಯತನವಲ್ಲವೇ'' ಇದು ಎಂದು ಟೀಕಿಸಿದೆ.