ನವದೆಹಲಿ, ಮಾ.25 (DaijiworldNews/PY): ದೇಶಾದ್ಯಂತ ಕೊರೊನಾ ಸೋಂಕಿನ ಹಿನ್ನೆಲೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿರುವ ಬೆನ್ನಲ್ಲೇ ಉತ್ತರಾಖಂಡ ಹೈಕೋರ್ಟ್ ಆದೇಶ ನೀಡಿದ್ದು, "ಮುಂಬರುವ ಕುಂಭ ಮೇಳಕ್ಕೆ ಆಗಮಿಸುವ ಭಕ್ತರು ಕೊರೊನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಲೇ ಬೇಕು" ಎಂದು ತಿಳಿಸಿದೆ.

ಉತ್ತರಾಖಂಡ ಸಿಎಂ ತಿರಥ್ ಸಿಂಗ್ ರಾವತ್ ಅವರು ಕೂಡಾ ಈ ಬಗ್ಗೆ ಆದೇಶ ಹೊರಡಿಸಿದ್ದು, "ಎಪ್ರಿಲ್ 1ರಂದುನಡೆಯಲಿರುವ ಕುಂಭಮೇಳದ ವೇಳೆ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಲು ಆಗಮಿಸುವ ಭಕ್ತರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿದ ಕೊರೊನಾ ನೆಗೆಟಿವ್ ವರದಿಯನ್ನು ತರಬೇಕು" ಎಂದಿದ್ದಾರೆ.
ಏತನ್ಮಧ್ಯೆ ಉತ್ತರಾಖಂಡ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, "ಕಳೆದ ಕೆಲ ವಾರಗಳಲ್ಲಿ ದೇಶದ 12 ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಕುಂಭಮೇಳದಲ್ಲಿ ಈ ರಾಜ್ಯದ ಭಕ್ತರೂ ಕೂಡಾ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಆ ಹಿನ್ನೆಲೆ ಈ ವಿಚಾರದ ಬಗ್ಗೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು" ಎಂದು ಹೇಳಿದ್ದಾರೆ,
"ಮಾರ್ಚ್ 17 ಹಾಗೂ ಮಾರ್ಚ್ 17ರಂದು ಕೊರೊನಾ ನಿಯಂತ್ರಕ್ಕೆ ಸಂಬಂಧಿಸಿದಂತೆ ಉತ್ತರಾಖಂಡಕ್ಕೆ ವಿಶೇಷ ತಂಡವೊಂದು ಆಗಮಿಸಿದ್ದು, ಮುಂಬರುವ ಕೊರೊನಾ ಸೋಂಕು ಹರಡದಂತೆ ರಾಜ್ಯ ಸರ್ಕಾರ ಏನೆಲ್ಲಾ ಕ್ರಮ ಕೈಗೊಂಡಿದ ಎನ್ನುವ ಬಗ್ಗೆ ಅಧ್ಯಯನ ನಡೆದಿದೆ" ಎಂದು ವರದಿ ಹೇಳಿದೆ.