ನವದೆಹಲಿ, ಮಾ.25 (DaijiworldNews/PY): "ಆರ್ಎಸ್ಎಸ್ ಹಾಗೂ ಅದರ ಸಂಬಂಧಿತ ಸಂಘಟನೆಯನ್ನು ಸಂಘ ಪರಿವಾರ ಎಂದು ಕರೆಯುವುದು ಸರಿಯಲ್ಲ ಎಂದು ನಾನು ನಂಬುತ್ತೇನೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಒಂದು ಕುಟುಂಬದ ಮಹಿಳೆಯರಿಗೆ, ಹಿರಿಯರಿಗೆ, ಗೌರವ ನೀಡದ ಹಾಗೂ ಸಹಾನುಭೂತಿ, ವಾತ್ಸಲ್ಯದ ಭಾವನೆ ಇಲ್ಲದ ಆರ್ಎಸ್ಎಸ್ ಹಾಗೂ ಅದರ ಸಂಬಂಧಿತ ಸಂಘಟನೆಯನ್ನು ಸಂಘ ಪರಿವಾರ ಎಂದು ಕರೆಯುವುದು ಸರಿಯಲ್ಲ ಎಂದು ನಾನು ನಂಬುತ್ತೇನೆ" ಎಂದಿದ್ದಾರೆ.
"ಕುಟುಂಬದಲ್ಲಿ ಮಹಿಳೆಯರಿದ್ದಾರೆ. ವೃದ್ದರ ಬಗ್ಗೆ ಗೌರವವಿದೆ. ಸಹಾನುಭೂತಿ ಹಾಗೂ ವಾತ್ಯಲ್ಯದ ಭಾವನೆ ಇದೆ. ಆದರೆ, ಇದು ಯಾವುದೂ ಕೂಡಾ ಆರ್ಎಸ್ಎಸ್ನಲ್ಲಿ ಇಲ್ಲ. ಈಗ ನಾನು ಆರ್ಎಸ್ಎಸ್ ಅನ್ನು ಸಂಘ ಪರಿವಾರ ಎಂದು ಕರೆಯುವುದಿಲ್ಲ" ಎಂದು ಹೇಳಿದ್ದಾರೆ.