ಕೋಲ್ಕತ್ತ, ಮಾ. 24 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು 'ಸುಳ್ಳುಗಾರ'ನಾಗಿದ್ದು, ರಾಜ್ಯಕ್ಕೆ ಗೂಂಡಾಗಳನ್ನು ರವಾನಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂದು ಆರೋಪಿಸಿದ್ದಾರೆ.
ಈ ಕುರಿತು ವಿಷ್ಣುಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, "ನಾನು ಪ್ರಧಾನ ಮಂತ್ರಿ ಅವರ ಕುರ್ಚಿಯನ್ನು ತುಂಬಾ ಗೌರವಿಸುತ್ತಿದ್ದು, ಆದರೆ ಪ್ರಧಾನಿ ಮೋದಿ ಅವರಂತಹ ಸುಳ್ಳುಗಾರನನ್ನು ಎಲ್ಲೂ ನೋಡಿಲ್ಲ. ಸುಳ್ಳನ್ನು ಮಾತ್ರ ಹೇಳುತ್ತಾರೆ. ಗೂಂಡಾಗಳು ಯಾರು? ಇಂದು ಬಿಜೆಪಿಯವರ ಚಿತ್ರಹಿಂಸೆಯ ಕಾರಣ ಉತ್ತರ ಪ್ರದೇಶದಲ್ಲಿ ಐಪಿಎಸ್ ಅಧಿಕಾರಿಗಳು ಉದ್ಯೋಗವನ್ನು ತೊರೆಯುತ್ತಿದ್ದಾರೆ" ಎಂದರು.
"ಬಂಗಾಳದ ಸಂಸ್ಕೃತಿಯನ್ನು ನಾಶ ಮಾಡಲು ಬಿಜೆಪಿ ಉತ್ತರ ಪ್ರದೇಶದ ಗೂಂಡಾಗಳನ್ನು ರಾಜ್ಯಕ್ಕೆ ಕರೆತಂದಿದೆ" ಎಂದಿದ್ದಾರೆ.
ಇನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ 15 ಲಕ್ಷ ರೂ.ಗಳನ್ನು ನೀಡುವುದಾಗಿ ಮೋದಿ ಭರವಸೆ ನೀಡಿದ್ದು, ಅವರು ನೀಡಿದ್ದಾರೆಯೇ? ಹಾಗಾಗಿ ಬಿಜೆಪಿಗೆ ಮತ ಹಾಕಬಾರದು ಎಂದು ಬೇಡಿಕೊಂಡರು" ಎಂದು ಹೇಳಿದ್ದಾರೆ.