ಹೈದರಾಬಾದ್, ಮಾ. 20(DaijiworldNews/HR) : ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ ಮಾಡಿದ ಆರೋಪದ ಮೇಲೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಸಾಂಧರ್ಭಿಕ ಚಿತ್ರ
ಆರೋಪಿಯು ಮನೋರೋಗದಿಂದ ಬಳಲುತ್ತಿದ್ದು, ಆತ ಸಂತ್ರಸ್ತರ ದೇಹದೊಂದಿಗೆ ಸ್ವಾಭಾವಿಕವಲ್ಲದ ಲೈಂಗಿಕತೆಯಲ್ಲಿ ತೊಡಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಜಾಮೀನಿನ ಮೇಲೆ ಬರುವುದಿಲ್ಲ ಮತ್ತು ಹೆಚ್ಚಿನ ಜನರಿಗೆ ಅಪಾಯವನ್ನುಂಟುಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು 90 ದಿನಗಳ ಮೊದಲು ನಿಖರವಾದ ಚಾರ್ಜ್ಶೀಟ್ ಸಲ್ಲಿಸಿದ್ದು, ಅಪರಾಧದ ವಿಚಾರಣೆಯು ಆತ ಜೈಲಿನಲ್ಲಿದ್ದಾಗಲೇ ನಡೆಯಬೇಕು ಎಂದು ಗುಂಟೂರು ಪೊಲೀಸ್ ಮುಖ್ಯಸ್ಥ ಅಮ್ಮಿ ರೆಡ್ಡಿ ತಿಳಿಸಿದ್ದಾರೆ.
ವಾರದ ಹಿಂದೆ ಮೆಲ್ಲಂಪುಡಿಯಿಂದ ನಾಪತ್ತೆಯಾಗಿ ಎರಡು ದಿನದ ಬಳಿಕ ಆರು ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದು, ಮಾರ್ಚ್ 14 ರಂದು ತಮ್ಮ ಮನೆಯ ಹೊರಗೆ ಆಟವಾಡುತ್ತಿತ್ತ ಆತ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದನು. ಕೊಲೆಗಾರನನ್ನು ಹುಡುಕಲು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದರು.
ಬಳಿಕ ಬಾಲಕನ ಕುಟುಂಬವು ಪೊಲೀಸರನ್ನು ಸಂಪರ್ಕಿಸಿ, ಮಗುವಿನ ಹತ್ಯೆಯ ಹಿಂದೆ 19 ವರ್ಷದ ಗೋಪಿ ಭಾಗಿಯಾಗಿರುವ ಶಂಕೆಯಿದೆ ಎಂದು ತಿಳಿಸಿದ್ದರು.
ಇನ್ನು ಆರೋಪಿಯ ತಂದೆ ಕೂಡ ಕ್ರಿಮಿನಲ್ ಆಗಿದ್ದು, ಅವರ ಮೊದಲ ಹೆಂಡತಿಯನ್ನು ಹತ್ಯೆ ಮಾಡಿದ್ದಕ್ಕಾಗಿ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.