ತುಮಕೂರು, ಮಾ.20 (DaijiworldNews/PY): "ಉಪಚುನಾವಣೆಗೆ ಕೊರೊನಾ ನಿಯಮ ಹಾಗೂ ಜನಸಂಖ್ಯೆ ಮಿತಿ ಅನ್ವಯಿಸುವುದಿಲ್ಲ" ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಲ್ಕು ಗೋಡೆಗಳ ನಡುವೆ ನಡೆಯುವ ಕಾರ್ಯಕ್ರಮಗಳಿಗೆ ಮಿತಿ ಷರತ್ತು ಹಾಕಿದ್ದು, ಸಾರ್ವಜನಿಕ ಸಭೆಯಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಮುಂಜಾಗ್ರತಾ ಕ್ರಮಕೈಗೊಂಡು ಕಾರ್ಯಕ್ರಮ ಮಾಡಬಹುದು" ಎಂದಿದ್ದಾರೆ.
ಶಾಲಾ-ಕಾಲೇಜು ಬಂದ್ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಶಾಲಾ-ಕಾಲೇಜು ಬಂದ್ ಮಾಡುವ ವಿಚಾರದ ಬಗ್ಗೆ ಯೋಚನೆ ಇಲ್ಲ. ಒಂದು ವಾರದ ಬಳಿಕ ಜನರಲ್ಲಿ ಸುಧಾರಣೆ ಕಂಡುಬಾರದೇ ಇದ್ದರೆ ಹಾಗೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ಕೊರೊನಾ ಹಣ ದುರುಪಯೋಗವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ವಿಧಾನಮಂಡಲದಲ್ಲಿ ಖರ್ಚು-ವೆಚ್ಚದ ವಿವರಣೆ ನೀಡಿದ್ದೇವೆ. ಹಣ ದುರುಪಯೋಗ ಆಗಿದೆ ಎಂದು ಹೇಳುವುದು ಸುಲಭ. ಸಾಕ್ಷ್ಯಾಧಾರಗಳಿಲ್ಲದೇ ಸುಖಾಸುಮ್ಮನೆ ಆರೋಪ ಮಾಡುವುದು ವಿಪಕ್ಷ ನಾಯಕರಿಗೆ ಉತ್ತಮವಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.