ಕಾರವಾರ, ಮಾ 20(DaijiworldNews/MS): ವಕ್ಫ್ ಬೋರ್ಡ್ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮೈಕ್ ಬಳಕೆ ಮಾಡದಂತೆ ಆದೇಶಿಸಿದ್ದು ಈ ಕಾನೂನು ಜಾರಿ ಆಗದೇ ಇದ್ದಲ್ಲಿ 1 ಸಾವಿರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಲಾಗುತ್ತದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಸುಮಾರು , 22 ವರ್ಷದ ಹಿಂದೆ ಮಸೀದಿಗಳಲ್ಲಿ ದ್ವನಿವರ್ಧಕ ಅಳ್ ಅವಡಿಸದಂತೆ ಆದೇಶಿಸಿತ್ತು. ಆದರೆ ಈ ಕಾನೂನು ಪಾಲನೆಯಾಗಿಲ್ಲ. ಇದೀಗ ವಕ್ಫ್ ಬೋರ್ಡ್ ಆದೇಶ ಹೊರಡಿಸಿದೆ. ಇದನ್ನು ಪಾಲಿಸದೇ ಇದ್ದಲ್ಲಿ ಏಪ್ರಿಲ್ ತಿಂಗಳ ಅಂತ್ಯದಲ್ಲಿ 1 ಸಾವಿರ ಪೊಲೀಸ್ ಠಾಣೆಗಳಲ್ಲಿ ಶ್ರೀರಾಮ ಸೇನೆಯ ಕಾರ್ಯರ್ತರು ಮಸೀದಿ ವಿರುದ್ಧ ದೂರು ದಾಖಲಿಸಲಿದ್ದಾರೆ.
ಮಸೀದಿಯಲ್ಲಿ ದಿನಕ್ಕೆ 5 ಬಾರಿ ದ್ವನಿವರ್ಧಕ ಬಳಕೆ ಮಾಡುತ್ತಾರೆ. ಧಾರ್ಮಿಕ ಕೇಂದ್ರಗಳಾದ ಚರ್ಚ್, ಮಸೀದಿ, ದೇವಸ್ಥಾನ ಎಲ್ಲಿಯೇ ಆದರೂ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಕೆ ಮಾಡುವುದು ನಡೆಯುತ್ತಿದ್ದರೆ ಇಂತಹ ವ್ಯವಸ್ಥೆ ನಿಲ್ಲಿಸಿದರೆ ತಪ್ಪಿಲ್ಲ. ಅದು ಯಾವ ಧರ್ಮವಾದರೂ ಇತರರಿಗೆ ತೊಂದರೆ ನೀಡಿ ಧರ್ಮಾಚರಣೆ ಮಾಡಬೇಕೆನ್ನುವುದಿಲ್ಲ ಎಂದು ಸ್ಪಷ್ಟಪಡಿಸಿದರು.