ಅಯೋಧ್ಯಾ, ಮಾ. 20(DaijiworldNews/HR): ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಶ್ರೀಲಂಕಾದಲ್ಲಿರುವ ‘ಸೀತಾ ಎಲಿಯಾ’ ಎಂಬ ಸ್ಥಳದ ಶಿಲೆಯನ್ನು ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ.

ಸಾಂಧರ್ಭಿಕ ಚಿತ್ರ
ರಾವಣನು ಸೀತಾ ಮಾತೆಯನ್ನು ಅಪಹರಿಸಿದ ಇದೇ ಸ್ಥಳದಲ್ಲಿ ಬಂಧಿಸಿಟ್ಟಿದ್ದ ಎನ್ನಲಾಗಿದ್ದು, ಈ ಕಾರಣಕ್ಕಾಗಿ ರಾಮಮಂದಿರ ನಿರ್ಮಾಣದಲ್ಲಿ ಸೀತಾ ಎಲಿಯಾದ ಶಿಲೆಯನ್ನು ಬಳಸಲಾಗುತ್ತದೆ ಎಂದು ವರದಿಯಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್, "ಅಯೋಧ್ಯೆಯ ರಾಮ ಮಂದಿರಕ್ಕಾಗಿ ಸೀತಾ ಎಲಿಯಾದಿಂದ ಶಿಲೆಯನ್ನು ನೀಡಲಾಗುವುದು. ಮಯೂರಪತಿ ಅಮ್ಮನ್ ದೇವಸ್ಥಾನದಲ್ಲಿ ಶ್ರೀಲಂಕಾದ ಹೈ ಕಮಿಷನರ್ ಮಿಲಿಂದ ಮೊರಗೋಡ ಅವರು ಈ ಶಿಲೆಯನ್ನು ಸ್ವೀಕರಿಸಿದರು. ಇದು ಭಾರತ ಮತ್ತು ಶ್ರೀಲಂಕಾದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ" ಎಂದು ಹೇಳಿದೆ.