ನವದೆಹಲಿ, ಮಾ.20 (DaijiworldNews/PY): "ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ತಾಂತ್ರಿಕ ದೋಷದಿಂದ ಲಕ್ಷಾಂತರ ಮಂದಿ ಬಳಕೆದಾರರು ತೊಂದರೆ ಎದುರಿಸುತ್ತಿದ್ದು, ನಂತರ ತಾಂತ್ರಿಕ ದೋಷವನ್ನು ಬಗೆ ಹರಿಸಲಾಗಿದೆ" ಎಂದು ಫೇಸ್ಬುಕ್ ಹೇಳಿದೆ.

ಭಾರತ, ಪಾಕಿಸ್ತಾನ ಸೇರದಂತೆ ಹಲವು ರಾಷ್ಟ್ರಗಳಲ್ಲಿ ಬಳಕೆದಾರರು ಸಮಸ್ಯೆಯನ್ನು ಎದುರಿಸುತ್ತಿದ್ದರು.
ಮೆಸೇಜಿಂಗ್ ಫ್ಲ್ಯಾಟ್ಫಾರ್ಮ್ ವಾಟ್ಸ್ಆ್ಯಪ್ ಮೇಲೂ ಕೂಡಾ ಪರಿಣಾಮ ಬೀರಿದ್ದು, ಹಲವು ಬಳಕೆದಾರರಿಗೆ ಸಂದೇಶ ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗಿಲ್ಲ. ಇದರೊಂದಿಗೆ ರಿಫ್ರೆಶ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಈ ಬಗ್ಗೆ ಬಳಕೆದಾರರು ಟ್ವೀಟ್ ಮಾಡಿದ್ದು, ವಾಟ್ಸ್ಯಾಪ್ ಡೌನ್ ಎಂಬ ಹ್ಯಾಶ್ ಟ್ಯಾಗ್ಗಳು ಟ್ರೆಂಡ್ ಆಗಿದ್ದವು. ಇದರೊಂದಿಗೆ ಇನ್ಸ್ಟಾಗ್ರಾಂ ಡೌನ್ ಹಾಗೂ ಫೇಸ್ಬುಕ್ ಡೌನ್ ಎನ್ನುವ ಹ್ಯಾಶ್ ಟ್ಯಾಗ್ಗಳೊಂದಿಗೆ ಸಮಸ್ಯೆಯನ್ನು ತೋಡಿಕೊಂಡಿವೆ.
"ವಾಟ್ಸ್ಯಾಪ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಾದ ತಾಂತ್ರಿಕ ದೋಷದಿಂದ ಬಳಕೆದಾರರಿಗೆ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸಲಾಗಿದೆ" ಎಂದು ಫೇಸ್ಬುಕ್ ವಕ್ತಾರರು ತಿಳಿಸಿದ್ದಾರೆ.