ನವದೆಹಲಿ, ಮಾ. 14 (DaijiworldNews/HR): ಐವತೈದು ದಿನಗಳಲ್ಲಿ 71 ದೇಶಗಳಿಗೆ 586 ಲಕ್ಷ ಡೋಸ್ ಕೊರೊನಾ ಲಸಿಕೆಗಳನ್ನು ಭಾರತ ರಫ್ತು ಮಾಡುವ ಇತಿಹಾಸ ನಿರ್ಮಿಸಿದ್ದು, 80.75 ಲಕ್ಷ ಡೋಸ್ಗಳನ್ನು ಬಡ ರಾಷ್ಟ್ರಗಳಿಗೆ ಉಚಿತವಾಗಿ ನೀಡಲಾಗಿದ್ದು, ವಿಶ್ವ ಕೋವಾಕ್ಸ್ ಕಾರ್ಯವಿಧಾನದ ಆಂಗವಾಗಿ 165.24 ಲಕ್ಷ ಡೋಸ್ ಹಾಗೂ ವಾಣಿಜ್ಯ ವ್ಯವಹಾರದ ಅಂಗವಾಗಿ 330.67 ಲಕ್ಷ ಡೋಸ್ಗಳನ್ನು ವ್ಯಾಪಾರ ಮಾಡುವ ಮೂಲಕ ಭಾರತ ಸಾಧನೆ ಮಾಡಿದ್ದು, ಈ ಸಾಧನೆ ಕ್ವಾಡ್ ಶೃಂಗಸಭೆಯಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎನ್ನಲಾಗಿದೆ.
ಸಾಂಧರ್ಭಿಕ ಚಿತ್ರ
ಬಾಂಗ್ಲಾ ದೇಶ ಭಾರತದಿಂದ ಐದನೆ ಒಂದು ಭಾಗದಷ್ಟು ಲಸಿಕೆ ಖರೀದಿಸಿದ್ದು, ಪಾಕಿಸ್ತಾನ ಕೂಡ ಭಾರತದಿಂದ ಲಸಿಕೆ ಪಡೆಯಲು ಮುಂದಾಗಿದ್ದು, ಅರ್ಜೆಂಟಿನಾ, ಬ್ರೆಜಿಲ್, ಈಜಿಪ್ಟ್, ದಕ್ಷಿಣಾ ಆಫ್ರಿಕಾ ಸೇರಿದಂತೆ ಸುಮಾರು 71 ದೇಶಗಳು ಭಾರತದಿಂದ ಲಸಿಕೆ ಪಡೆದುಕೊಂಡಿವೆ.
ಇನ್ನು ಕಡಿಮೆ ಅಭಿವೃದ್ಧಿ ಹೊಂದಿರುವ ಹಾಗೂ ಅತಿ ಸಣ್ಣ ರಾಷ್ಟ್ರಗಳಿಗೆ ಶೇ.50 ರಷ್ಟು ಕೊರೊನಾ ಲಸಿಕೆ ಸರಬರಾಜು ಮಾಡುವ ಮೂಲಕ ಮಹತ್ವದ ಮೈಲುಗಲ್ಲು ಸ್ಥಾಪಿಸಿದ್ದು, ಚೀನಾ ಮ್ಯಾನ್ಮಾರ್ಗೆ 3 ಲಕ್ಷ ಡೋಸ್ ಲಸಿಕೆ ನೀಡುವ ಭರವಸೆ ನೀಡಿದ್ದರೂ ಆ ರಾಷ್ಟ್ರಕ್ಕೆ ಇನ್ನೂ ಲಸಿಕೆ ಸರಬರಾಜು ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.