ಮುಂಬೈ, ಮಾ.14 (DaijiworldNews/PY): "ತನ್ನ ದೇಶಿ ಕಾರ್ಯಾಚರಣೆಯನ್ನು ವಿಸ್ತರಿಸಲು ಸ್ಪೈಸ್ ಜೆಟ್ ಕಂಪೆನಿ ಉದ್ದೇಶಿಸಿದ್ದು, ಮಾರ್ಚ್ 28ರಿಂದ ಕೆಲವು ಮಾರ್ಗಗಳಲ್ಲಿ ಹೆಚ್ಚುವರಿ ಸೇವೆ ಸೇರಿದಂತೆ 66 ಹೊಸ ವಿಮಾನಗಳು ಹಾರಾಟ ಪ್ರಾರಂಭಿಸಲಿವೆ" ಎಂದು ಹೇಳಿದೆ.
"ಈ ಹೊಸ ವಿಮಾನಗಳು ಮಹಾನಗರ ಹಾಗೂ ಮಹಾನಗರೇತರ ಭಾಗಗಳಲ್ಲಿ ಸೇವೆಯನ್ನು ಪ್ರಾರಂಭ ಮಾಡಲಿವೆ. ಈ ಮುಖೇನ ಸ್ಥಳೀಯ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ" ಎಂದು ಸಿಸಿಓ ಶಿಲ್ಪಾ ಭಾಟಿಯಾ ಹೇಳಿದ್ದಾರೆ.
"ನಮ್ಮ ದೇಶೀಯ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸಲು ಹಾಗೂ 66 ಹೊಸ ವಿಮಾನಗಳನ್ನು ಸ್ಪೈಸ್ ಜೆಟ್ಗೆ ಸೇರಿಸಲು ನಾನು ಸಂತೋಷ ಪಡುತ್ತೇವೆ" ಎಂದು ತಿಳಿಸಿದ್ದಾರೆ.
"ಉಡಾನ್ ಯೋಜನೆಯ ಅಡಿಯಲ್ಲಿ ಸ್ಪೈಸ್ ಜೆಟ್ ಕಂಪೆನಿ ಸಣ್ಣ ನಗರಗಳ ಪ್ರಯಾಣದ ಬೇಡಿಕೆಯನ್ನು ಈಡೇರಿಸುತ್ತಿದೆ. ಹೊಸ ವಿಮಾನಗಳು, ಅಹಮದಾಬಾದ್-ದರ್ಭಂಗ್-ಅಹಮದಾಬಾದ್, ಹೈದರಾಬಾದ್-ದರ್ಭಂಗ್-ಹೈದರಾಬಾದ್, ಪುಣೆ-ದರ್ಭಂಗ್-ಪುಣೆ, ಕೋಲ್ಕತ್ತ-ದರ್ಭಂಗ್-ಕೋಲ್ಕತ್ತ ಮಾರ್ಗಗಳಲ್ಲಿ ಕಾರ್ಯಾಚರಿಸಲಿವೆ" ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.