ಬೆಂಗಳೂರು, ಮಾ.14 (DaijiworldNews/MB) : ವಿಶೇಷ ತನಿಖಾ ತಂಡ (ಎಸ್ಐಟಿ) ಮಾರ್ಚ್ 13 ರ ಶನಿವಾರ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಐವರಲ್ಲಿ ಮೂವರ ಮನೆಗಳ ಮೇಲೆ ದಾಳಿ ನಡೆಸಿದೆ.
ತುಮಕೂರಿನ ಶಿರಾ, ದೇವನಹಳ್ಳಿ, ಬೆಂಗಳೂರಿನ ವಿಜಯನಗರದ ನಾಗರಬಾವಿ ಬಾಲ್ಕಿಯಲ್ಲಿರುವ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ತಂಡವು ದೇವನಹಳ್ಳಿ ಮತ್ತು ಬಾಲ್ಕಿಯಲ್ಲಿ ಪ್ರಮುಖ ದಾಖಲೆಗಳನ್ನು ಕಂಡುಹಿಡಿದಿದೆ ಎಂದು ಮೂಲಗಳು ತಿಳಿಸಿವೆ.
ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಹುಡುಕಾಟವನ್ನು ಎಸ್ಐಟಿ ತೀವ್ರಗೊಳಿಸಿದೆ. ಅವರು ರಾಜಕೀಯ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪರಾರಿಯಾಗಿದ್ದ ಶಂಕಿತರಿಗಾಗಿ ಹುಡುಕಾಟ ನಡೆಯುತ್ತಿದೆ.
ಆರೋಪಿಗಳು ಬೆಂಗಳೂರಿನಿಂದ ಸಿಡಿಯನ್ನು ಅಪ್ಲೋಡ್ ಮಾಡಿದ್ದು, ಅದನ್ನು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಮೂಲಕ ರಷ್ಯಾದಿಂದ ಅಪ್ಲೋಡ್ ಮಾಡಿದಂತೆ ಕಾಣುವಂತೆ ಮಾಡಿದ್ದಾರೆ. ಶುಕ್ರವಾರ ಎಂಟು ಗಂಟೆಗಳ ಕಾಲ ನಡೆದ ವಿಚಾರಣೆಯ ವೇಳೆ ತಮ್ಮ ವಶದಲ್ಲಿರುವ ಆರೋಪಿಗಳಿಂದ ಎಸ್ಐಟಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದೆ.
ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಮೊಬೈಲ್ ಫೋನ್ ಎರಡು ದಿನಗಳ ಹಿಂದೆ ಗೌರಿಬಿದನೂರಿನಲ್ಲಿ ಸ್ವಿಚ್ ಆಫ್ ಮೋಡ್ನಲ್ಲಿ ಹೋಗಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಅವರು ಆಂಧ್ರಪ್ರದೇಶ ಅಥವಾ ತಮಿಳುನಾಡಿನಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಎಸ್ಐಟಿಯಲ್ಲಿದೆ.
ದಿನೇಶ್ ಕಲ್ಲಹಳ್ಳಿಗೆ ನೋಟಿಸ್ ನೀಡಲು ಎಸ್ಐಟಿ ಸಿದ್ಧತೆ ನಡೆಸುತ್ತಿದೆ. ಅಪರಿಚಿತರು ಸಿಡಿಯನ್ನು ಹಸ್ತಾಂತರಿಸಿದ್ದಾರೆ ಎಂದು ದಿನೇಶ್ ಕಬ್ಬನ್ ಪಾರ್ಕ್ ಪೊಲೀಸರೊಂದಿಗೆ ಹೇಳಿದ್ದರು. ಕಸ್ಟಡಿಗೆ ತೆಗೆದುಕೊಂಡ ಐದು ಆರೋಪಿಗಳಲ್ಲಿ ಒಬ್ಬಾತ ಮಾತ್ರ ಸಿಡಿಯನ್ನು ಹಸ್ತಾಂತರಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಆತನ ಮಾಹಿತಿಯ ಆಧಾರದ ಮೇಲೆ ಎಸ್ಐಟಿ ಕಲ್ಲಹಳ್ಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಿದೆ.