ಬೆಂಗಳೂರು, ಮಾ 13 (DaijiworldNews/MS): ಸಿಡಿ ಪ್ರಕರಣ ಹೊರಬಿದ್ದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ , ಕೊನೆಗೂ ದೂರು ದಾಖಲಿಸಿದ್ದಾರೆ. "ತನ್ನನ್ನು ಬ್ಯ್ಲಾಕ್ ಮೇಲ್ ಮಾಡಿದ್ದಾರೆ" ಎಂದು ಆರೋಪಿಸಿ ಸದಾಶಿವ ನಗರದ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ.
ಆದರೆ ಖುದ್ದು ದೂರು ನೀಡಲು ಹೋಗದೇ ಲಿಖಿತ ರೂಪದಲ್ಲಿ ಈ ದೂರನ್ನ ಆಪ್ತ ಎಂ.ವಿ ನಾಗರಾಜ್ ಠಾಣೆಗೆ ಕೊಟ್ಟು ಕಳಿಸಿದ್ದಾರೆ ಎನ್ನಲಾಗಿದೆ. ಆದರೆ ವಕೀಲರ ಸಲಹೆಯ ಮೇರೆಗೆ ಬ್ಲಾಕ್ಮೇಲ್ ಮಾಡಿರುವವರ ಹೆಸರುಗಳನ್ನು ತಮ್ಮ ದೂರಿನಲ್ಲಿ ಅವರು ದಾಖಲು ಮಾಡಿಲ್ಲ.
ಸಿಡಿಯಿಂದ ತನ್ನ ತೇಜೋವಧೆ ಆಗಿದೆ, ಸೂಕ್ತವಾಗಿ ತನಿಖೆ ಮಾಡಿ ಎಂದಿದೆ. ಸದ್ಯ ಪೊಲೀಸರು ಕಾನೂನು ತಜ್ಞರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ ಬಳಿಕ ಕೇಸ್ ದಾಖಲಿಸಿಕೊಂಡು ಎಫ್ಐಆರ್ ದಾಖಲು ಮಾಡಿಕೊಳ್ಳಬಹುದು ಎನ್ನಲಾಗಿದೆ.
ಇನ್ನೊಂದೆಡೆ ಸಂತ್ರಸ್ತ ಯುವತಿಯೂ ಸಹ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದ್ದು ಸಂತ್ರಸ್ತ ಯುವತಿ, ಪ್ರಕರಣದ ಕಿಂಗ್ಪಿನ್, ಹ್ಯಾಕರ್ ಹಾಗು ವಿಜಯನಗರದ ಯುವಕ ರಹಸ್ಯ ಸಭೆ ನಡೆಸಿರುವ ಬಗ್ಗೆ ಎಸ್ಐಟಿ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿತ್ತು.