ಮಹಾರಾಷ್ಟ್ರ, ಮಾ.13 (DaijiworldNews/HR): ಮಹಾರಾಷ್ಟ್ರದ ವಸೈನಲ್ಲಿ ಸಂಬಂಧಿಕರನ್ನ ಭೇಟಿಯಾಗಲು ಬಂದಿದ್ದ ಮಹಿಳೆಯೊಬ್ಬರು ಎಟಿಎಂನಲ್ಲಿ ನಡೆಯುತ್ತಿದ್ದ ಕಳ್ಳತನವನ್ನ ತಪ್ಪಿಸಿದ ಘಟನೆ ನಡೆದಿದ್ದು, ಕಳ್ಳ ಎಟಿಎಂ ಕೇಂದ್ರದ ಒಳಗೆ ನುಗ್ಗಿದ್ದನ್ನು ಗಮನಿಸಿದ ಸುಕನ್ಯಾ ಪವಾರ್, ಕೂಡಲೇ ಶಟರ್ ಎಳೆದು ಬಳಿಕ ನೆರೆಹೊರೆಯವರನ್ನ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸುಕನ್ಯಾ ಅವರ ಸಂಬಂಧಿಕರೊಬ್ಬರು ನಿಧನರಾದ ಹಿನ್ನೆಲೆ ಸಂತಾಪ ಸೂಚಿಸಲು ವಸೈಗೆ ಆಗಮಿಸಿದ್ದು, ಮುಂಜಾನೆ 2.30ರ ಸುಮಾರಿಗೆ ಧಾರ್ಮಿಕ ಗ್ರಂಥವನ್ನ ಪಠಿಸುತ್ತಾ ಕುಳಿತಿದ್ದ ವೇಳೆ ಸುಕನ್ಯಾಗೆ ಎಟಿಎಂ ಕೇಂದ್ರದ ಬಳಿ ಶಬ್ದ ಕೇಳಿದಾಗ ತಕ್ಷಣ ಎಟಿಎಂ ಕೇಂದ್ರದ ಬಳಿ ಈಕೆ ಆಗಮಿಸುತ್ತಾ ಇದ್ದಂತೆಯೇ ಶಟರ್ ಎಳೆದುಕೊಂಡಿರೋದನ್ನು ಸುಕನ್ಯಾ ಗಮನಿಸಿದ್ದು, ಕೂಡಲೇ ಸಂಬಂಧಿಕರ ಮನೆಗೆ ವಾಪಸ್ಸಾದ ಮಹಿಳೆ ಲಾಕ್ನ್ನು ತೆಗೆದುಕೊಂಡು ಬಂದು ಕಳ್ಳನನ್ನ ಕೂಡಿ ಹಾಕಿ ಅಲಾರಂ ಆನ್ ಮಾಡುವ ಮೂಲಕ ನೆರೆಹೊರೆಯವರನ್ನ ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಇನ್ನು ತಕ್ಷಣ ಪೊಲೀಸರಿಗೆ ಈ ಮಾಹಿತಿಯನ್ನು ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಆತ ಸುತ್ತಿಗೆಯ ಸಹಾಯದಿಂದ ಪೊಲೀಸರು ಹಾಗೂ ಸಾರ್ವಜನಿಕರನ್ನ ಬೆದರಿಸಲು ಯತ್ನಿಸಿದ್ರೂ ಕೂಡ ಆತನನ್ನ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಕಳ್ಳನನ್ನು ಸಲೀಂ ಮನ್ಸೂರಿ( 25 ) ಎಂದು ಗುರುತಿಸಲಾಗಿದೆ.
ಎಟಿಎಂ ಮಷಿನ್ ಅನ್ನು ಒಡೆದು ಹಾಕಿದ್ದ ಆದರೆ ಅದರೊಳಗಿದ್ದ 10 ಲಕ್ಷ ರೂಪಾಯಿಯನ್ನ ಕದಿಯುವುದಕ್ಕೆ ಆತನಿಗೆ ಆಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.