ಮೈಸೂರು, ಮಾ.13 (DaijiworldNews/HR): ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಸುಳಿವಿನ ಮೇರೆಗೆ ಮೇಟಗಳ್ಳಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಸುಮಾ ಹಾಗೂ ಪಿಂಪ್ ಸಿದ್ಧರಾಜು ಎಂದು ಗುರುತಿಸಲಾಗಿದೆ.
ಸುಮಾ ಎಂಬಾಕೆ 9 ತಿಂಗಳ ಹಿಂದೆ ಕೂಡ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ಸಿಕ್ಕಿ ಬಿದ್ದಿದ್ದಳು. ಆಗ ತನ್ನನ್ನು ಬಲವಂತವಾಗಿ ಇಲ್ಲಿಗೆ ಕರೆದು ತಂದು ದಂಧೆಯಲ್ಲಿ ತೊಡಗಿಸಿದ್ದಾರೆ ಎಂದು ಹೇಳಿ ತಪ್ಪಿಸಿಕೊಂಡಿದ್ದಳು ಎನ್ನಲಾಗಿದೆ.
ಆದರೆ, ಈಗ ವೇಶ್ಯಾವಾಟಿಕೆಯ ಜಾಲಕ್ಕೆ ಆಕೆಯೇ ಕಿಂಗ್ಪಿನ್ ಎಂಬುದು ಆಕೆಯ ಮೊಬೈಲ್ ವಶ ಪಡಿಸಿಕೊಂಡ ನಂತರ ಟಿಕ್ಟಾಕ್ ವಿಡಿಯೋಗಳಿಂದ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಇನ್ನು ಈಕೆಯು ಟಿಕ್ಟಾಕ್ ಮೂಲಕ ಮೈಸೂರು ಭಾಗದ ಯುವಕರನ್ನು ತನ್ನತ್ತ ಸೆಳೆದು, ಬಳಿಕ ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದಳು ಎಂದು ತಿಳಿದು ಬಂದಿದ್ದು, ಆಕೆ ಸಾಮಾಜಿಕ ಜಾಲತಾಣಗಳಾದ ಟಿಕ್ಟಾಕ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಮೂಲಕವೇ ತನ್ನ ಬಳಿಗೆ ಯುವಕರನ್ನು ಸೆಳೆಯುತ್ತಿದ್ದಳು. ಈರ್ವರನ್ನೂ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.