ಧರ್ಮಶಾಲಾ, ಮಾ.06 (DaijiworldNews/PY): ಖ್ಯಾತ ಬೌದ್ಧ ಧರ್ಮಗುರು ದಲೈಲಾಮಾ ಅವರು ಶನಿವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಕೊರೊನಾ ಲಸಿಕೆ ಪಡೆದರು.

ಕೊರೊನಾ ಲಸಿಕೆ ಪಡೆದುಕೊಂಡ ಬಳಿಕ ಮಾತನಾಡಿದ ಅವರು, "ಕೊರೊನಾ ನಿಯಂತ್ರಣಕ್ಕಾಗಿ ಕೊರೊನಾ ಲಸಿಕೆಯನ್ನು ಪಡೆಯಬೇಕು" ಎಂದು ತಿಳಿಸಿದ್ದಾರೆ.
"ಕೊರೊನಾ ವೈರಸ್ ಇಡೀ ವಿಶ್ವವನ್ನು ಕಾಡುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಕೊರೊನಾ ಲಸಿಕೆ ಅವಶ್ಯಕ. ಕೊರೊನಾ ಸೋಂಕು ನಿಯಂತ್ರಣ ಕೊರೊನಾ ಲಸಿಕೆಯಿಂದ ಮಾತ್ರವೇ ಸಾಧ್ಯ. ಹಾಗಾಗಿ ನಾನು ಇಂದು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೇನೆ. ನೀವು ಸಹ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ" ಎಂದಿದ್ದಾರೆ.