ನವದೆಹಲಿ, ಮಾ.04 (DaijiworldNews/MB): ಕೆಲವು ರೀತಿಯ ಅಶ್ಲೀಲ ವಿಚಾರಗಳನ್ನು ಕೆಲವು ಓವರ್ ದಿ ಟಾಪ್(ಒಟಿಟಿ) ಪ್ಲಾಟ್ಫಾರ್ಮ್ಗಳು ತೋರಿಸುತ್ತದೆ. ಅಂತಹ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಒಟಿಟಿ ಪ್ಲಾಟ್ಫಾರ್ಮ್ಗಳಿಗೂ ಸ್ಕ್ರೀನಿಂಗ್ನ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಅಮೆಜಾನ್ ಪ್ರೈಮ್ ವಿಡಿಯೋ ಭಾರತದ ಮುಖ್ಯಸ್ಥರಾದ ಅಪರ್ಣಾ ಪುರೋಹಿತ್ ಅವರು, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು, ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳ ನಿಯಂತ್ರಣಕ್ಕೆ ಕೈಗೊಂಡ ಇತ್ತೀಚಿನ ಮಾರ್ಗಸೂಚಿಗಳನ್ನು ಕೋರ್ಟ್ಗೆ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.
ಇದೇ ವೇಳೆ ವೆಬ್ ಸರಣಿ 'ತಾಂಡವ್' ಮೂಲಕ ಅಪರ್ಣಾ ಪುರೋಹಿತ್ನ ನಿರೀಕ್ಷಿನ ಜಾಮೀನು ನಿರಾಕರಿಸಿದೆ.
ನ್ಯಾಯಮೂರ್ತಿ ಆರ್ ಎಸ್ ರೆಡ್ಡಿ ಅವರನ್ನೂ ಒಳಗೊಂಡ ನ್ಯಾಯಪೀಠ, "ಕೆಲವು ಒಟಿಟಿ ಪ್ಲಾಟ್ಫಾರ್ಮ್ಗಳು ತಮ್ಮ ಪ್ಲ್ಯಾಟ್ಫಾರ್ಮ್ಗಳಲ್ಲಿ ಅಶ್ಲೀಲ ವಸ್ತುಗಳನ್ನು ತೋರಿಸುತ್ತಿರುವುದನ್ನು ನಿಲ್ಲಿಸಬೇಕು" ಎಂದು ಹೇಳಿದ್ದು, ಈ ಸಂದರ್ಭ ಪುರೋಹಿತ್ ಪರ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಅಪರ್ಣಾ ಪುರೋಹಿತ್ ಅಮೆಜಾನ್ನ ಉದ್ಯೋಗಿಯಷ್ಟೇ ಆಗಿದ್ದು ನಿರ್ಮಾಪಕ ಅಥವಾ ತಾರಾಬಳಗದಲ್ಲಿಲಲ್ಲ. ಈ ದೂರು ಆಘಾತಕಾರಿ ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ ಮತ್ತು ಮೊಹಮ್ಮದ್ ಝಿಶನ್ ಅಯೂಬ್ ಅಭಿನಯದ ತಾಂಡವ್ ಸ್ಟ್ರೀಮಿಂಗ್ ಪ್ರಾರಂಭಿಸಿ ವಿವಾದಕ್ಕೆ ಗುರಿಯಾಗಿತ್ತು.