ನವದೆಹಲಿ, ಫೆ.20 (DaijiworldNews/MB) : ಫೆ. 21 ರಂದು ಅಂತರರಾಷ್ಟ್ರೀಯ ಮಾತೃ ಭಾಷಾ ದಿನವನ್ನಾಗಿ ಆಚರಿಸಲಾಗುವ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಸಂಸದರಿಗೆ ಮೂರು ಪುಟಗಳ ಪತ್ರ ಬರೆದಿದ್ದು, ಸಂಸದರು ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಅದರ ಪ್ರಚಾರಕ್ಕಾಗಿ ಶ್ರಮಿಸಬೇಕು ಎಂದು ಹೇಳಿದ್ದಾರೆ.

''ಮೊದಲು ನಾವು ಕಲಿಯುವ ಮತ್ತು ಮಾತನಾಡುವ ಭಾಷೆಯೇ ನಮ್ಮ ಜೀವನದ ಆತ್ಮವಾಗಿರುವಾಗ ಅದನ್ನು ನಾವು ಪ್ರೋತ್ಸಾಹಿಸುವುದು ಮುಖ್ಯ. ಮಗು ಜಗತ್ತಿನಲ್ಲಿ ತನ್ನ ಮೊದಲ ಹೆಜ್ಜೆ ಇಡಲು ಕಾರಣ ಮಾತೃಭಾಷೆ, ಮನೆಯಲ್ಲಿ ಮಾತನಾಡುವ ಮಾತೃ ಭಾಷೆ ನಮ್ಮ ಸಾಹಿತ್ಯ ಕೌಶಲ, ಶೈಕ್ಷಣಿಕ ಜ್ಞಾನವನ್ನು ಅಭಿಚೃದ್ದಿಪಡಿಸುತ್ತದೆ'' ಎಂದು ತಿಳಿಸಿದರು.
''ನಮ್ಮ ಮಾತೃಭಾಷೆಯು ನಾವು ಬೇರೆ ಭಾಷೆಯನ್ನು ಕಲಿಯಲು ಕೂಡಾ ನೆರವಾಗುತ್ತದೆ. ನಮ್ಮ ಮಾತೃ ಭಾಷೆಗೆ ಆದ್ಯತೆ ನೀಡಿದರೆ ನಮ್ಮ ಸಂಸ್ಕೃತಿಯ ಅರಿವು ಕೂಡಾ ನಮಗೆ ಬರುತ್ತದೆ. ಈ ಹಿನ್ನೆಲೆ ಸಂಸದರು ಮ್ಮ ಕ್ಷೇತ್ರದ ಸ್ಥಳೀಯ ಭಾಷೆ, ಮಾತೃ ಭಾಷೆಯನ್ನು ಪ್ರೋತ್ಸಾಹಿಸಿ ಅದನ್ನು ಪ್ರಚಾರ ಮಾಡಬೇಕು'' ಎಂದು ಹೇಳಿರುವ ಅವರು, ''ಸುಮಾರು 200 ಭಾರತೀಯ ಭಾಷೆಗಳು ಅಳಿವಿನಂಚಿನಲ್ಲಿವೆ'' ಎಂದು ಕೂಡಾ ಉಲ್ಲೇಖಿಸಿದ್ದಾರೆ.