ಔರಂಗಾಬಾದ್, ಫೆ. 20 (DaijiworldNews/HR): ಅಂತರರಾಜ್ಯ ಡೀಸೆಲ್ ಕಳ್ಳರ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, 14 ಮಂದಿಯನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಕನ್ನಡ ತಾಲ್ಲೂಕಿನಲ್ಲಿ ನಡೆದಿದೆ.

ಫೆ. 17 ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಾಲ್ಕು ಟ್ರಕ್, ಡೀಸೆಲ್ ತುಂಬಿದ್ದ 40 ಕಂಟೇನರ್ ಮತ್ತು 98 ಲಕ್ಷ ಮೌಲ್ಯದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಗ್ಯಾಂಗ್ನ ಸದಸ್ಯರು ಗುಜರಾತ್ನ ತಾಪಿ ಜಿಲ್ಲೆಯಲ್ಲಿ ಟ್ರಕ್ಗಳ ಮೂಲಕ ಮರಳನ್ನು ತುಂಬಿಸಿಕೊಂಡು ಉಸ್ಮಾನಾಬಾದ್ನಲ್ಲಿ ಮಾರಾಟ ಮಾಡುತ್ತಿದ್ದು, ಪೆಟ್ರೋಲ್ ಬಂಕ್ಗಳ ಬಳಿ ತಂಗುತ್ತಿದ್ದರು. ಬಳಿಕ ರಾತ್ರಿ ವೇಳೆ ಬಂಕ್ನಲ್ಲಿನ ಹ್ಯಾಂಡ್ ಪಂಪ್ ಮೂಲಕ ಡೀಸೆಲ್ ಕದಿಯುತ್ತಿದ್ದರು. ತಾವು ಉಪಯೋಗಿಸಿ, ಉಳಿದ ಡೀಸೆಲ್ ಅನ್ನು ಕಡಿಮೆ ಬೆಲೆಗೆ ಇತರ ಟ್ರಕ್ ಚಾಲಕರಿಗೆ ಮಾರುತ್ತಿದ್ದರು" ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಈ ಗ್ಯಾಂಗ್ ಐದು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದೆ ಎಂದು ಎಸ್.ಪಿ ವಿವರಿಸಿದ್ದಾರೆ.