ನವದೆಹಲಿ, ಫೆ.20 (DaijiworldNews/PY): ದೆಹಲಿ ಪೊಲೀಸರು 2020ನೇ ವರ್ಷದಲ್ಲಿ 32 ಉಗ್ರರನ್ನು ಬಂಧಿಸಿದ್ದು, 2016ರ ಬಳಿಕ ಇದು ಗರಿಷ್ಠ ಸಂಖ್ಯೆಯಾಗಿದೆ ಎಂದು ದೆಹಲಿ ಪೋಲಿಸ್ ಹೇಳಿದೆ.

ಸಾಂದರ್ಭಿಕ ಚಿತ್ರ
2019ರಲ್ಲಿ 5, 2018ರಲ್ಲಿ 8, 2017ರಲ್ಲಿ 11 ಹಾಗೂ 2016ರಲ್ಲಿ 16 ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
"2020ರಲ್ಲಿ ಐಸಿಸ್ ಉಗ್ರ ಕೇಂದ್ರವನ್ನು ಪತ್ತೆ ಮಾಡಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಜಿಹಾದ್ ಭಯೋತ್ಪಾದನೆಗೆ ಪಾಕ್ ಕುಮ್ಮಕ್ಕು ನೀಡುತ್ತಿದ್ದು, ಅಲ್ಖೈದಾ ಮುಂದಾಳತ್ವದಲ್ಲಿ ಭಾರತದ ನಕಲಿ ಕರೆನ್ಸಿಗಳನ್ನು ಮುದ್ರಿಸುತ್ತಿದೆ" ಎಂದು ವರದಿ ಮಾಡಿದೆ.
"ದೆಹಲಿ ಪೊಲೀಸ್, ಅತೀ ದೊಡ್ಡ ಮಾದಕ ವಸ್ತು ಸಾಗಣೆ ಜಾಲವನ್ನು ಪತ್ತೆ ಮಾಡಿದೆ. ಅಲ್ಲದೇ, 330 ಕೆ.ಜಿ ಹೆರೋಯಿನ್ ಅನ್ನು ವಶಕ್ಕೆ ಪಡೆದುಕೊಂಡಿದೆ" ಎಂದು ಹೇಳಿದೆ.