ನವದೆಹಲಿ, ಫೆ.20 (DaijiworldNews/PY): ದೇಶದಲ್ಲಿ ಶನಿವಾರವೂ ಕೂಡಾ ತೈಲ ಬೆಲೆ ಹೆಚ್ಚಳವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಶನಿವಾರ ತೈಲೋತ್ಪನ್ನಗಳ ಬೆಲೆಯಲ್ಲಿ 37 ರಿಂದ 39 ಪೈಸೆಯಷ್ಟು ಹೆಚ್ಚಳವಾಗಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 39 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 37 ಪೈಸೆ ಏರಿಕೆಯಾಗಿದ್ದು, ಈ ಮುಖಾಂತರ ದೆಹಲಿಯಲ್ಲಿ ಪೆಟ್ರೋಲ್ ದರ 90.58 ರೂ. ಗೆ ಏರಿಕೆಯಾದರೆ, ಡೀಸೆಲ್ ಬೆಲೆ 80.97ರೂ.ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರದಲ್ಲಿ 40 ಪೈಸೆ ಏರಿಕೆಯಾಗಿದ್ದು, ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 93.59 ರೂ.ಗೆ ಏರಿಕೆ ಕಂಡಿದೆ. ಡೀಸೆಲ್ ಬೆಲೆಯಲ್ಲಿ ಕೂಡಾ 39 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ ದರ 85.82 ರೂ.ಗೆ ಹೆಚ್ಚಳವಾಗಿದೆ.
ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.98 ಏರಿಕೆ ಕಂಡಿದ್ದು, ಪ್ರತೀ ಲೀಟರ್ ಡೀಸೆಲ್ ದರ 88.05ರೂ.ಗೆ ಏರಿಕೆಯಾಗಿದೆ. ಇನ್ನು ಚೆನ್ನೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 92.58 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆ 85.61 ರೂ. ಗೆ ಹೆಚ್ಚಳವಾಗಿದೆ.
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 91.76 ರೂ. ಗೆ ಏರಿಕೆಯಾದರೆ, ಡೀಸೆಲ್ ದರ 84.54 ರೂ.ಗೆ ಏರಿಕೆಯಾಗಿದೆ.