ಮಡಿಕೇರಿ, ಫೆ.19 (DaijiworldNews/PY): ಕೊಡಗು ಹಾಗೂ ಹಾಸನ ಗಡಿ ಭಾಗದಲ್ಲಿ ಶುಕ್ರವಾರ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.







ಕೊಡ್ಲಿಪೇಟೆ ಸುತ್ತಮುತ್ತ ಮಳೆಯಾಗಿದ್ದು, ಅಂಕನಹಳ್ಳಿಯಲ್ಲಿ ರಾಶಿ ರಾಶಿ ಆಲಿಕಲ್ಲು ಮಳೆ ಸುರಿದಿದೆ. ಇದರಿಂದ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ.
ಅಂಕನಹಳ್ಳಿ ದಿಢೀರನೇ ಸುರಿದ ಆಲಿಕಲ್ಲು ಮಳೆಗೆ ಗ್ರಾಮದ ರೈತರು ಬೆಳೆದ ವಿವಿಧ ಬೆಳೆಗಳು ನಾಶವಾಗಿದೆ. ಈ ಹಿನ್ನೆಲೆ ಆ ಭಾಗದ ರೈತರು ಕಂಗಾಲಾಗಿದ್ದಾರೆ.