ದಾಂತೇವಾಡ, ಫೆ.19 (DaijiworldNews/PY): ಶುಕ್ರವಾರ ಛತ್ತೀಸ್ಗಡದ ದಾಂತೇವಾಡ ಜಿಲ್ಲೆಯಲ್ಲಿ ಇಬ್ಬರು ದಂಪತಿ ಸೇರಿ ಆರು ಮಂದಿ ನಕ್ಸಲರು ಶರಣಾಗಿದ್ದಾರೆ. ಈ ನಕ್ಸಲರ ಬಗ್ಗೆ ಸುಳಿವು ನೀಡಿದವರಿಗೆ ಒಟ್ಟು 15 ಲಕ್ಷ. ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.

ಸಾಂದರ್ಭಿಕ ಚಿತ್ರ
ಪೊಲೀಸರ ಮುಂದೆ ಶರಣಾದ ನಕ್ಸಲರನ್ನು ಮಾವೋವಾದಿಗಳ ಇಂದ್ರಾವತಿ ಪ್ರದೇಶ ಸಮಿತಿಯ ಕಮ್ಲು ಅಲಿಯಾಸ್ ಸಂತೋಷ್ ಪೋಡಿಯಮ್ (25), ಆತನ ಪತ್ನಿ ಪಾಯ್ಕೆ ಕೊವಾಸಿ (22), ಪೂರೈಕೆ ತಂಡದ ಸದಸ್ಯರಾದ ಲಿಂಗಾ ರಾಮ್ ಯುಕಿ (36), ಆತನ ಪತ್ನಿ ಭೂಮೆಯುಕಿ (28), ಕಾಟೆಕೇಲ್ಯನ್ ಪ್ರದೇಶ ಸಮಿತಿಯ ಕುಮಾರಿ ಜೋಗಿ (36), ಚೇತನಾ ನಾಟ್ಯ ಮಂಡಿಯ ಪಾಂಡೆ ಕವಾಸಿ ಎಂದು ತಿಳಿದುಬಂದಿದೆ.
"ಮಾವೋವಾದಿಗಳ ಪೊಳ್ಳಾದ ತತ್ವಗಳಿಂದ ನಾವು ನಿರಾಶೆಗೊಂಡಿದ್ದೆವು. ನಮ್ಮನ್ನು ಪೊಲೀಸರ ಲೋನ್ ವರೋತು ಅಭಿಯಾನವು ಹಿಂಸೆ ತೊರೆಯುವಂತೆ ಪ್ರೇರೇಪಿಸಿತು ಎಂದಿರುವ ನಕ್ಸಲ್ ಕಾರ್ಯಕರ್ತರು ಸಿಆರ್ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.
ಶರಣಾದ ನಕ್ಸಲರು ಕಳೆದ 15 ವರ್ಷಗಳಿಂದ ನಿಷೇಧಿತ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.