ಬೆಂಗಳೂರು, ಫೆ.19 (DaijiworldNews/HR): ರಾಮಮಂದಿರ ಮತ್ತು ಆರ್ಎಸ್ಎಸ್ ವಿರುದ್ಧ ಪಿಎಫ್ಐ ನಾಯಕರು ನೀಡಿರುವ ಹೇಳಿಕೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗರಂ ಆಗಿದ್ದು, ಪಿಎಫ್ಐ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಂಗಳೂರಿನ ಉಳ್ಳಾಲದಲ್ಲಿ ಪಿಎಫ್ಐ ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕವಾಗಿದ್ದು, ದೇಶದ ಜನತೆಯನ್ನು ಒಡೆಯುವ ಪ್ರಯತ್ನದ ಹೇಳಿಕೆ ಅದಾಗಿದೆ" ಎಂದರು.
ಇನ್ನು "ಆರ್ಎಸ್ಎಸ್ ಸಂಘಟನೆ ಒಂದು ದೇಶಭಕ್ತಿಯ ಪ್ರತೀಕವಾಗಿದ್ದು, ರಾಮ ಮಂದಿರ ನಿರ್ಮಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಬಗ್ಗೆ ಪಿಎಫ್ಐ ನಾಯಕರು ಮಾತನಾಡಿರುವುದು ಆಕ್ಷೇಪಾರ್ಹವಾಗಿದ್ದು, ದೇಶ ವಿರೋಧಿ ಹೇಳಿಕೆ ನೀಡಿರುವ ಪಿಎಫ್ ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ" ಎಂದು ಹೇಳಿದ್ದಾರೆ.