ನವದೆಹಲಿ, ಫೆ.19 (DaijiworldNews/PY): "ಹೊಸ ಗೌಪ್ಯತೆ ನೀತಿಯ ಮೂಲಕ ಫೇಸ್ಬುಕ್ನೊಂದಿಗೆ ಡೇಟಾ ಹಂಚಿಕೆಯ ಕುರಿತು ತೀವ್ರ ಪರಿಶೀಲನ್ ನಡೆಸುತ್ತಿರುವ ವಾಟ್ಸಾಪ್, ವೈಯುಕ್ತಿಕ ಚಾಟ್ಗಳನ್ನು ಎಂಡ್ ಟು ಎಂಡ್ ಎನ್ಕ್ರಿಪ್ಟ್ ಮಾಡಲಾಗುವುದು ಹಾಗೂ ಕಂಪೆನಿಯು ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ" ಎಂದು ಪುನರುಚ್ಚರಿಸಿದೆ.

"ವಾಟ್ಸಾಪ್ ತನ್ನ ಬ್ಲಾಗ್ ಪೋಸ್ಟ್ನಲ್ಲಿ ಹೊಸ ಸೇವಾ ನಿಯಮದ ಅಪ್ಡೇಟ್ ಫೇಸ್ಬುಕ್ನೊಂದಿಗೆ ಡೇಟಾವನ್ನು ಹಂಚಿಕೊಳ್ಳುವುದಿಲ್ಲ. ಇದಕ್ಕೆ ನಾವು ನಮ್ಮ ಸಾಮರ್ಥ್ಯವನ್ನು ವಿಸ್ತರಿಸುವುದಿಲ್ಲ" ಎಂದಿದೆ.
ಸುಪ್ರೀಂ ಕೋರ್ಟ್ ಕಳೆದ ವಾರ, "ಜನರು ಗೌಪತ್ಯೆಯನ್ನು ಕಳೆದುಕೊಳ್ಳುವ ಬಗ್ಗೆ ತೀವ್ರ ಆತಂಕಗೊಂಡಿದ್ದಾರೆ. ವಾಟ್ಸಾಪ್ ಹೊಸ ಗೌಪ್ಯತೆ ನೀತಿಯ ವಿರುದ್ದ ಮನವಿಯನ್ನು ಆಲಿಸಿದ್ದರಿಂದ ಈ ಹಕ್ಕನ್ನು ರಕ್ಷಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ" ಎಂದು ಸ್ಪಷ್ಟಪಡಿಸಿದೆ. ಇದನ್ನು ಮೇ.15ರವರೆಗೆ ಮುಂದೂಡಲಾಗಿದೆ.
ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಅವರು, "ಗೌಪ್ಯತೆ ಕಳೆದುಕೊಳ್ಳುವ ಬಗ್ಗೆ ಜನರಿಗೆ ತೀವ್ರ ಆತಂಕವಿದೆ. ನೀವು ಎರಡು ಅಥವಾ ಮೂರು ಟ್ರಿಲಿಯನ್ ಡಾಲರ್ ಕಂಪೆನಿಯಾಗಿರಬಹುದು. ಆದರೆ, ಜನರು ಗೌಪ್ಯತೆಯನ್ನು ಹಣಕ್ಕಿಂದ ಹೆಚ್ಚು ಗೌರವಿಸುತ್ತಾರೆ. ನಾವು ಜನರ ಗೌಪ್ಯತೆಯನ್ನು ರಕ್ಷಿಸಬೇಕು" ಎಂದು ವಾಟ್ಸಾಪ್ ಪರ ಸಲಹೆಗಾರರಿಗೆ ತಿಳಿಸಿದ್ದರು.
"ಕೆಲವು ಸೀಮಿತ ಡೇಟಾವನ್ನು ಹೊಂದಿರುವ ವಾಟ್ಸಾಪ್ ಅಗತ್ಯವಿದ್ದರೂ ಸಹ, ಜನರು ವಿಶ್ವಾಸಾರ್ಹ ಮತ್ತು ಸುರಕ್ಷಿತವಾದ ಎರಡೂ ಅಪ್ಲಿಕೇಶನ್ಗಳನ್ನು ಹುಡುಕುತ್ತಿದ್ದಾರೆ ಎಂದು ನಂಬುತ್ತದೆ" ಎಂದು ವಾಟ್ಸಾಪ್ ಹೇಳಿದೆ.
"ನಾವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಚಿಂತನಶೀಲರಾಗಿರಲು ನಾವು ಪ್ರಯತ್ನಿಸುತ್ತೇವೆ ಮತ್ತು ಈ ಜವಾಬ್ದಾರಿಗಳನ್ನು ಕಡಿಮೆ ಮಾಹಿತಿಯೊಂದಿಗೆ ಪೂರೈಸುವ ಹೊಸ ಮಾರ್ಗಗಳನ್ನು ನಾವು ಅಭಿವೃದ್ಧಿಪಡಿಸುತ್ತೇವೆ, ಹೆಚ್ಚು ಅಲ್ಲ" ಎಂದು ಅದು ಉಲ್ಲೇಖಿಸಿದೆ.
ನೀತಿ ಬದಲಾವಣೆಯು, ಫೆಬ್ರವರಿ 8 ರಿಂದ ಜಾರಿಗೆ ಬರಲು ನಿರ್ಧರಿಸಲಾಗಿತ್ತು.