ಲಕ್ನೋ, ಫೆ.19 (DaijiworldNews/PY): ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಏಳು ಮಂದಿ ವಿದೇಶಿಯರು ಸೇರಿದಂತೆ 17 ಮಂದಿಯನ್ನು ಲಕ್ನೋದ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್ ಹಿನ್ನೆಲೆ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಸಂದರ್ಭ ಇವರ ವಿರುದ್ದ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು.
ಇವರ ಮೇಲಿನ ಆರೋಪಗಳಿಗೆ ಸಂಬಂಧಪಟ್ಟಂತೆ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲದ್ದರಿಂದ ಎಲ್ಲರನ್ನೂ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸುತ್ತಿರುವುದಾಗಿ ಲಕ್ನೋದ ಸಿಜೆಂ ನ್ಯಾಯಾಲಯ ಹೇಳಿದೆ.
ಆರೋಪ ಮುಕ್ತಗೊಂಡಿರುವ 17 ಮಂದಿಯ ಪೈಕಿ ಏಳು ಮಂದಿ ಇಂಡೋನೇಷ್ಯಾದ ಪ್ರಜೆಗಳಾಗಿದ್ದು, ಉಳಿದವರು ಭಾರತೀಯರಾಗಿದ್ದಾರೆ.
ಕಳೆದ ವರ್ಷ ಜ.20ರಂದು ಅಧಿಕೃತ ವೀಸಾ ಹಾಗೂ ಪಾಸ್ಪೋರ್ಟ್ನೊಂದಿಗೆ ಭಾರತಕ್ಕೆ ಆಗಮಿಸಿದ್ದಾಗಿ ವಿಚಾರಣೆಯ ಸಂದರ್ಭ ಇಂಡೋನೇಷ್ಯಾದ ಪ್ರಜೆಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಅಲ್ಲದೇ, ಕೊರೊನಾದ ಮೊದಲ ಪ್ರಕರಣವು ಇಂಡೋನೇಷ್ಯಾದಲ್ಲಿ ಪತ್ತೆಯಾಗಿದ್ದು, 2020ರ ಮಾ.2ಕ್ಕೆ ಎಂದಿದ್ದರು.
ಇವರ ವಿರುದ್ದ ಅಲಹಾಬಾದ್ನ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಎಲ್ಲರಿಗೂ ಕೂಡಾ ಜಾಮೀನು ದೊರಕಿತ್ತು.