ಬೆಂಗಳೂರು, ಫೆ.16 (DaijiworldNews/MB) : ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮದ ಎರಡನೇ ಸುತ್ತು ಸೋಮವಾರ ಆರಂಭವಾಗಿದೆ. ಮೊದಲ ಡೋಸ್ ನೀಡಿದ 28 ದಿನಗಳ ನಂತರ ಈಗ ಸರ್ಕಾರ 2ನೇ ಡೋಸ್ನ ಲಸಿಕೆ ನೀಡುತ್ತಿದೆ.

ಮೊದಲ ಡೋಸ್ ನೀಡಿದ 8 ರಿಂದ 12 ವಾರಗಳ ನಡುವೆ 2ನೇ ಡೋಸ್ ನೀಡಿದರೆ ಮಾತ್ರ ಲಸಿಕೆ ಪರಿಣಾಮಕಾರಿ ಎಂದು ಆರೋಗ್ಯ ತಜ್ಞರ ಸಲಹೆ ನೀಡಿದ್ದರು.
ಸೋಮವಾರ ರಾಜ್ಯದ ಸುಮಾರು 11,985 ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್ನ ಲಸಿಕೆ ನೀಡಲಾಗಿದೆ. ಲಸಿಕೆ ನೀಡುವ ಕಾರ್ಯದಲ್ಲಿ ವಿಜಯಪುರ ಅಗ್ರ ಸ್ಥಾನದಲ್ಲಿದ್ದರೆ, ಕೊಡಗು, ಬೆಂಗಳೂರು ನಗರ, ಮಂಡ್ಯ ನಂತರದ ಸ್ಥಾನದಲ್ಲಿದೆ. ಇನ್ನು ಬೆಳಗಾವಿಯಲ್ಲಿ ಇನ್ನೂ 2ನೇ ಹಂತದ ಲಸಿಕೆ ನೀಡಿಕೆ ಆರಂಭವಾಗಿಲ್ಲ.
ಸೋಮವಾರ ಮೊದಲ ಮತ್ತು 2ನೇ ಡೋಸ್ ಲಸಿಕೆಗಳನ್ನು ಒಟ್ಟು 8,21,939 ಮಂದಿಗೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಶೇ.51ರಷ್ಟು ಮಂದಿಗೆ ಅಂದರೆ 4,22,938 ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ವರದಿಯಾಗಿದೆ.