ಬೆಂಗಳೂರು, ಫೆ.03 (DaijiworldNews/PY): "ಮೋದಿಯವರ ಆಡಳಿತದಲ್ಲಿ ಬಡವರು, ಜನಸಾಮಾನ್ಯರು ಬದುಕಲು ಅವಕಾಶವೇ ಇಲ್ಲದಂತಾಗಿದೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಮೋದಿಯವರ ಆಡಳಿತದಲ್ಲಿ ಬಡವರು, ಜನಸಾಮಾನ್ಯರು ಬದುಕಲು ಅವಕಾಶವೇ ಇಲ್ಲದಂತಾಗಿದೆ. ಒಂದು ಕಡೆ ಗ್ಯಾಸ್ ಸಬ್ಸಿಡಿ ರದ್ದು ಮಾಡಿರುವ ಸರ್ಕಾರ ಮತ್ತೊಂದು ಕಡೆ ಸೀಮೆಎಣ್ಣೆ ದರ ಏರಿಸಿ ಬಡವರನ್ನು ಗುಡಿಸಿ ಗುಂಡಾಂತರ ಮಾಡುತ್ತಿದೆ. ಬ್ರಿಟಿಷರ ಆಳ್ವಿಕೆಗಿಂತಲೂ ಅತ್ಯಂತ ಹೀನವಾದ ಆಡಳಿತವಿದು. ಈ ಸರ್ಕಾರಕ್ಕೆ ಬಡವರ ಬಗ್ಗೆ ಕನಿಷ್ಟ ಕಾಳಜಿಯಾದರೂ ಇರಬೇಡವೆ?" ಎಂದು ಪ್ರಶ್ನಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲೇ ಸಬ್ಸಿಡಿ ಸೀಮೆಎಣ್ಣೆ ದರ ಹಾಗೂ ಮಾರುಕಟ್ಟೆ ದರ ಸಮ ಸ್ಥಿತಿಗೆ ಬಂದಿತ್ತು. 2021-22ನೇ ಸಾಲಿಗೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ನಲ್ಲಿ ಸೀಮೆಎಣ್ಣೆ ಸಬ್ಸಿಡಿಗೆ ಯಾವುದೇ ಹಣ ಒದಗಿಸಿಲ್ಲ. ಈ ಕಾರಣದಿಂದ ಸೀಮೆಎಣ್ಣೆ ಸಬ್ಸಿಡಿಯನ್ನು ಸರ್ಕಾರ ಪೂರ್ತಿಯಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ ಎಂಬುದಾಗಿ ವಿಶ್ಲೇಷಿಸಲಾಗಿದೆ.