ನವದೆಹಲಿ, ಫೆ. 02 (DaijiworldNews/SM): ಕೇಂದ್ರ ಸರಕಾರ ಹೊರಡಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ತೀವ್ರವಾಗಿದೆ. ಈ ನಡುವೆ ಸಂಸತ್ ನಲ್ಲಿ ಹಾಗೂ ಸಂಸತ್ ಹೊರಗಡೆ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಹೇಳಿದ್ದಾರೆ.

ಇಂದು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಪಕ್ಷ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ಈ ನಡುವೆ ಸದನ ಎರಡು ಬಾರಿ ಮುಂದೂಡಲ್ಪಟ್ಟಿತು. ಬಳಿಕ ಸದನದ ಕಲಾಪ ಆರಂಭವಾದಾಗ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಮೋದಿ ಸರ್ಕಾರ ಸದಾ ಸಿದ್ಧವಾಗಿದೆ ಎಂದು ತೋಮರ್ ಹೇಳಿದರು.
ಸಂಸತ್ ನ ಒಳಗಡೆ ಹಾಗೂ ಹೊರಗಡೆ ಎರಡು ಪ್ರದೇಶಗಳಲ್ಲೂ ರೈತರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮೋದಿ ಸರಕಾರ ಸಿದ್ಧವಿದೆ. ರೈತರ ಪರವಾಗಿ ಸರಕಾರ ನಿಲ್ಲಲಿದೆ ಎಂದು ಕೃಷಿ ಸಚಿವ ತೋಮರ್ ಅವರು ಸ್ಪಷ್ಟಪಡಿಸಿದ್ದಾರೆ.