ನವದೆಹಲಿ,ಫೆ.02 (DaijiworldNews/HR): ದೇಶದಲ್ಲಿ 10 ಲಕ್ಷ ಜನಸಂಖ್ಯೆಗೆ ಪ್ರತಿಯಾಗಿ ಸಂಭವಿಸುವ ಕೊರೊನಾ ಸಾವಿನ ಸಂಖ್ಯೆ ದಕ್ಷಿಣ ಏಷ್ಯಾ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗಿಂತಲೂ ಅಧಿಕವಿರುವುದಕ್ಕೆ ಅನೇಕ ಅಂಶಗಳು ಕಾರಣವಾಗಿರಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಾಂದರ್ಭಿಕ ಚಿತ್ರ
ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಪ್ರತಿಯಾಗಿ 112 ಮಂದಿ ಕೊರೊನಾಗೆ ಬಲಿಯಾಗುತ್ತಾರೆ.
"ದೇಶದಲ್ಲಿ ಸಾವಿನ ಸಂಖ್ಯೆಯನ್ನು ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕ ಹಾಕುವುದು ಸೂಕ್ತವಲ್ಲ. ಇಲ್ಲಿನ ಭೌಗೋಳಿಕ ಪರಿಸ್ಥಿತಿ, ಇಲ್ಲಿರುವ ಪ್ರಕರಣಗಳು, ಪರೀಕ್ಷೆ ಮತ್ತು ವರದಿಯ ಶಿಷ್ಟಾಚಾರಗಳು ಕೂಡ ಸಾವಿನ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತವೆ" ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ತಿಳಿಸಿದ್ದಾರೆ.
ಇನ್ನು ಅಮೇರಿಕಾದಲ್ಲಿ 1347, ಬ್ರಿಟನ್ನಲ್ಲಿ 1533, ಸ್ಪೇನ್ನಲ್ಲಿ 1247, ಬ್ರೆಜಿಲ್ನಲ್ಲಿ 1044 ಮತ್ತು ರಷ್ಯಾದಲ್ಲಿ 495 ಪ್ರಕರಣಗಳು ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಪ್ರತಿಯಾಗಿ ಸಂಭವಿಸಿದ ಸಾವುಗಳಾಗಿವೆ ಎಂದು ವರದಿಯಾಗಿದೆ.